HomeLatest NewsBREAKING: ನಾನು ಇನ್ನು 8-10 ವರ್ಷ ರಾಜಕಾರಣ ಮಾಡಬಹುದು, ಹೊಸಬರಿಗೆ ಸ್ಥಾನ ಸಿಗಬೇಕು: ಡಿಸಿಎಂ ಡಿಕೆ...

BREAKING: ನಾನು ಇನ್ನು 8-10 ವರ್ಷ ರಾಜಕಾರಣ ಮಾಡಬಹುದು, ಹೊಸಬರಿಗೆ ಸ್ಥಾನ ಸಿಗಬೇಕು: ಡಿಸಿಎಂ ಡಿಕೆ ಅಚ್ಚರಿ ಹೇಳಿಕೆ

ಬೆಂಗಳೂರು: ನನಗೂ 63 ವರ್ಷ ಆಯ್ತು, ಇನ್ನು 8ರಿಂದ 10 ವರ್ಷ ರಾಜಕಾರಣ ಮಾಡಬಹುದು. ಹೊಸಬರಿಗೆ ಸೂಕ್ತ ಸ್ಥಾನಗಳು ಸಿಗಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಎಫ್.ಕೆ.ಸಿ.ಸಿ.ಐ. ಸಭಾಭವನದಲ್ಲಿ ನಡೆದ ಡಿ.ಕೆ ಶಿವಮಕುಮಾರ್ ಬಾಲ್ಯ, ಶೈಕ್ಷಣಿಕ ದಿನಗಳು ಹಾಗೂ ರಾಜಕೀಯ ಬೆಳವಣಿಗೆಯ ಹಾದಿಯನ್ನು ಪರಿಚಯಿಸುವ “A Symbol of Loyalty D K Shivakumar” ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನನ್ನ ಕ್ಷೇತ್ರದ ಜನರು ಪಕ್ಷದ ಅಭಿಮಾನಿಗಳಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಷಡ್ಯಂತ್ರ ಮಾಡಿ ಜೈಲಿಗೆ ಕಳಿಸಿದ ವೇಳೆ ಜನ ನನ್ನನ್ನು ಬೆಳೆಸಿದ್ದಾರೆ. ದೇವರು ವರ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ನಾನು ಸೋಲು ಒಪ್ಪಿಕೊಳ್ಳುತ್ತೇನೆ, ಟೀಕೆಗಳನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ನನ್ನ ವಿರೋಧಿಗಳು ಕಥೆ ಕಟ್ಟಿ ಆರೋಪ ಮಾಡ್ತಾರೆ. ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಕಾರಣ ನಿಂತ ನೀರಲ್ಲ, ಯಾವುದೂ ಶಾಶ್ವತವಲ್ಲ. ನಾನು ದೇವೇಗೌಡರ ಕುಟುಂಬದ ವಿರುದ್ಧವಾಗಿ ರಾಜಕಾರಣ ಮಾಡಿದ್ದೇನೆ. ಆದರೆ ಪಕ್ಷ ನಿಷ್ಠೆಗಾಗಿ ನಾನು ಕುಮಾರಸ್ವಾಮಿ ಜೊತೆ ಕೈಜೋಡಿಸಿದ್ದೇನೆ. ಆದರೂ ದುಡ್ಡು ಹೊಡೆಯಲು ಎಂದು ಮಾತನಾಡುತ್ತಾರೆ, ಮಾತನಾಡಿಕೊಳ್ಳಲಿ. ನನ್ನ ಬದುಕಿನ ಈ ಪುಸ್ತಕದಲ್ಲಿ ಶೇಕಡ 99 ರಷ್ಟು ಅಂಶಗಳು ಸತ್ಯವಾಗಿವೆ ಎಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular