ಯಾದಗಿರಿ: ಸೇವೆಗೆ ಸೇರಿ 10 ವರ್ಷ ಪೂರ್ಣಗೊಳಿಸಿದ್ದಕ್ಕೆ ರೌಡಿಶೀಟರ್ ಜೊತೆಗೆ ಸಂಭ್ರಮಾಚರಣೆ ನಡೆಸಿದ ಪಿಎಸ್ಐ ಅಮಾನತು ಮಾಡಲಾಗಿದೆ.
ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪೃಥ್ವಿಕ್ ಶಂಕರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆಯ ಪಿಎಸ್ಐ ರಾಜಶೇಖರ ರಾಥೋಡ್ ಅಮಾನತುಗೊಂಡವರು. ಅವರು ಸೇವೆಗೆ ಸೇರಿ 10 ವರ್ಷ ಪೂರ್ಣಗೊಳಿಸಿದ್ದಕ್ಕೆ ರೌಡಿಶೀಟರ್ ನಾಗರಾಜ ಜೊತೆಗೆ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ನಡೆಸಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅಲ್ಲದೇ, ಪೋಲಿಸ್ ಠಾಣೆ ಆವರಣದಲ್ಲಿ ರೌಡಿಶೀಟರ್ ನಾಗರಾಜ್ ಜೊತೆಗೆ ಪಿಎಸ್ಐ ಬ್ಯಾಡ್ಮಿಂಟನ್ ಆಡಿದ್ದರು. ಈ ಬಗ್ಗೆ ಇಲಾಖೆ ತನಿಖೆ ನಡೆಸಿ ಕರ್ತವ್ಯ ಲೋಪ, ಶಿಸ್ತು ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.