ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. 71 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದೆ.
ಬಿಹಾರದ 71 ಕ್ಷೇತ್ರಗಳಿಗೆ ಬಿಜೆಪಿ ಮೊದಲ ಪಟ್ಟಿ ಪ್ರಕಟಿಸಿದ್ದು, ಅವುಗಳಲ್ಲಿ 9 ಕ್ಷೇತ್ರಗಳಿಗೆ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ತಾರಾಪುರ ಕ್ಷೇತ್ರದಿಂದ ಡಿಸಿಎಂ ಸಾಮ್ರಾಟ್ ಚೌಧರಿಗೆ ಟಿಕೆಟ್ ನೀಡಲಾಗಿದೆ. ಸ್ಪೀಕರ್ ನಂದಕುಮಾರ್ ಯಾದವ್ ಗೆ ಟಿಕೆಟ್ ಕೈತಪ್ಪಿದೆ.
ತಲಾ 101ಕ್ಷೇತ್ರಗಳನ್ನು ಜೆಡಿಯು ಹಾಗೂ ಬಿಜೆಪಿ ಹಂಚಿಕೆ ಮಾಡಿಕೊಂಡಿವೆ. ಲೋಕ ಜನಶಕ್ತಿ (ರಾಮ್ ವಿಲಾಸ್) ಪಕ್ಷಕ್ಕೆ 29 ಕ್ಷೇತ್ರ, ಜೀತನ್ ರಾವ್ ಮಾಂಝಿ ಅವರ ಹೆಚ್ ಎ ಎಂ ಪಕ್ಷಕ್ಕೆ 6 ಕ್ಷೇತ್ರಗಳು, ಉಪೇಂದ್ರ ಕುಶ್ವಾಹ ರಾಷ್ಟ್ರೀಯ ಲೋಕಮೋರ್ಚಾಗೆ 6 ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ.
ನವೆಂಬರ್ 6 ಹಾಗೂ 11 ರಂದು ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.