ಧಾರವಾಡ : ಜಿಲ್ಲಾ ಶಿಶಿಕ್ಷು ಮೇಳ-2025 ಅಕ್ಟೋಬರ್ 15, 2025 ರಂದು ಬೆಳಿಗ್ಗೆ 9 ಗೆಂಟೆಯಿಂದ ಸಂಜೆ 4 ಗೆಂಟೆಯವರೆಗೆ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅವ್ವಪ್ಪಣ್ಣ ಅತ್ತಿಗೇರಿ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಟೌನ್ ಹಾಲ್‍ದಲ್ಲಿ ಆಯೋಜಿಸಲಾಗಿದೆ.
ಸದರಿ ಮೇಳದಲ್ಲಿ ಸುಮಾರು 30 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಜಿಲ್ಲೆಯ ಸರ್ಕಾರಿ, ಅರೇ ಸರ್ಕಾರಿ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಉತ್ತೀರ್ಣರಾದ ತರಬೇತಾರ್ಥಿಗಳು ಭಾಗವಹಿಸಿ, ಜಿಲ್ಲಾ ಶಿಶಿಕ್ಷು ಮೇಳ-2025 ರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.