ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಬಿ)ಯಲ್ಲಿ ಬರೋಬ್ಬರಿ 50 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಬೆಂಗಳೂರು ವಲಯದ ಎನ್.ಸಿ.ಬಿ. ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು 45 ಕೆಜಿ ಹೈಡ್ರೋ ಗಾಂಜಾ, 6 ಕೆಜಿ ಸೈಲೋಸಿಬಿನ್ ಅಣಬೆ ಸೀಜ್ ಮಾಡಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿ 50 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಥೈಲ್ಯಾಂಡ್ ನಿಂದ ಡ್ರಗ್ಸ್ ಸಾಗಾಟದ ಬಗ್ಗೆ ಎನ್.ಸಿ.ಬಿ. ಮಾಹಿತಿ ಸಂಗ್ರಹಿಸಿತ್ತು. ಮಾಹಿತಿಯಂತೆ ಅಕ್ಟೋಬರ್ 9ರಂದು ಕೊಲಂಬೋದಿಂದ ಬರುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರಿಂದ 31 ಕೆಜಿ ಹೈಡ್ರೋ ಗಾಂಜಾ, 4 ಕೆಜಿ ಸೈಲೋಸಿಬಿನ್ ಅಣಬೆಯನ್ನು ಸೀಜ್ ಮಾಡಲಾಗಿದೆ.
ಇಬ್ಬರ ವಿಚಾರಣೆಯ ವೇಳೆ ಹ್ಯಾಂಡ್ಲರ್ ಶ್ರೀಲಂಕಾದಿಂದ ಬರುವ ಮಾಹಿತಿ ಸಿಕ್ಕಿದೆ. ಅದರಂತೆ ಕಾದು ಶ್ರೀಲಂಕಾ ಪ್ರಜೆಯನ್ನು ಕೂಡ ಅಧಿಕಾರಿಗಳು ಬಂಧಿಸಿದ್ದಾರೆ. ಹ್ಯಾಂಡ್ಲರ್ ನಿಂದ 14 ಹೈಡ್ರೋ ಗಾಂಜಾ 2 ಕೆಜಿ ಸೈಲೋಸಿಬಿನ್ ಅಣಬೆಯನ್ನು ವಶಕ್ಕೆ ಪಡೆಯಲಾಗಿದೆ. 250 ಫುಡ್ ಟಿನ್ ಗಳಲ್ಲಿ ಡ್ರಗ್ಸ್ ಸೀಲ್ ಮಾಡಿ ಆರೋಪಿಗಳು ತಂದಿದ್ದರು.
ಒಟ್ಟು 45 ಕೆಜಿ ಹೈಡ್ರೋಗಾಂಜಾ, 6 ಕೆಜಿ ಸೈಲೋಸಿಬಿನ್ ವಶಕ್ಕೆ ಪಡೆಯಲಾಗಿದೆ. 18 ಕೇಸ್ ಗಳಲ್ಲಿ ಮಾದಕ ವಸ್ತುಗಳನ್ನು ಬೆಂಗಳೂರು ಎನ್.ಸಿ.ಬಿ. ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ವರ್ಷ 100 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. 18 ಪ್ರಕರಣಗಳಲ್ಲಿ 45 ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರದಲ್ಲಿ ದಂಧೆ ನಡೆಯುತ್ತಿತ್ತು.