HomeLatest Newsಪ್ರಿಯಕರನೊಂದಿಗೆ ಪರಾರಿಯಾದ ಪುತ್ರಿ: ಶ್ರದ್ಧಾಂಜಲಿ ಫ್ಲೆಕ್ಸ್ ಹಾಕಿ ಶ್ರಾದ್ಧ ಮಾಡಿ ಗ್ರಾಮಸ್ಥರಿಗೆ ತಿಥಿಯೂಟ ಹಾಕಿಸಿದ ಪೋಷಕರು...!

ಪ್ರಿಯಕರನೊಂದಿಗೆ ಪರಾರಿಯಾದ ಪುತ್ರಿ: ಶ್ರದ್ಧಾಂಜಲಿ ಫ್ಲೆಕ್ಸ್ ಹಾಕಿ ಶ್ರಾದ್ಧ ಮಾಡಿ ಗ್ರಾಮಸ್ಥರಿಗೆ ತಿಥಿಯೂಟ ಹಾಕಿಸಿದ ಪೋಷಕರು…!

ಬೆಳಗಾವಿ: ಪ್ರೀತಿಸಿದ್ದ ಯುವಕನೊಂದಿಗೆ ಪುತ್ರಿ ಹೋಗಿದ್ದರಿಂದ ಪೋಷಕರು ಬದುಕಿದ್ದಾಗಲೇ ಮಗಳ ಶ್ರಾದ್ಧ ಮಾಡಿದ್ದಾರೆ. ಪ್ರೇಮ ಪ್ರಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ಮಗಳ ಶ್ರಾದ್ಧ ಮಾಡಿ ಸಂಬಂಧಿಕರು, ಗ್ರಾಮಸ್ಥರಿಗೆ ತಿಥಿ ಊಟ ಹಾಕಿಸಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಘಟನೆ ನಡೆದಿದೆ. 19 ವರ್ಷದ ಯುವತಿ ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಒಂದೇ ಗ್ರಾಮದವರಾಗಿದ್ದ ಇಬ್ಬರೂ ಮನೆಯವರ ಮುಂದೆ ಮದುವೆಯಾಗುವ ಬಗ್ಗೆ ವಿಷಯ ತಿಳಿಸಿದ್ದರು. ಆದರೆ ಪೋಷಕರು ಒಪ್ಪದ ಕಾರಣಕ್ಕೆ ಮನೆ ಬಿಟ್ಟು ಓಡಿ ಹೋಗಿದ್ದರು.

ಯುವತಿಯ ತಂದೆ ರಾಯಭಾಗ ಪೊಲೀಸ್ ಠಾಣೆಯಲ್ಲಿ ಪುತ್ರಿ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಪೊಲೀಸರು ಯುವ ಜೋಡಿಯನ್ನು ಕರೆದು ರಾಜೀ ಮಾಡಿಸಲು ಪ್ರಯತ್ನಿಸಿದ್ದಾರೆ. ಪ್ರೀತಿಸಿದ ಯುವಕನೊಂದಿಗೆ ಇರುವುದಾಗಿ ಯುವತಿ ತಿಳಿಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರಿಂದ ಸಿಟ್ಟಿಗೆದ್ದ ಯುವತಿಯ ಕುಟುಂಬದವರು ಆಕೆಯ ಶ್ರಾದ್ಧ ಮಾಡಿದ್ದಾರೆ. ಗ್ರಾಮದಲ್ಲಿ ಮಗಳ ಫೋಟೋ ಇರುವ ಶ್ರದ್ಧಾಂಜಲಿ ಫ್ಲೆಕ್ಸ್ ಹಾಕಿದ್ದಾರೆ. ಸಂಬಂಧಿಕರು, ಗ್ರಾಮಸ್ಥರಿಗೆ ತಿಥಿ ಊಟ ಹಾಕಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular