BIG NEWS: ಮೈಸೂರು ಪೊಲೀಸರಿಗೆ ಸಿಎಂ ಪುತ್ರ ಯತೀಂದ್ರನ ಕಾಟ ಹೆಚ್ಚಾಗಿದೆ: ಪೊಲೀಸರಿಗೆ ಭಯ ಶುರುವಾಗಿದೆ: ಪ್ರತಾಪ್ ಸಿಂಹ ಆರೋಪ

ಮೈಸೂರು: ಸಿಎಂ ಸಿದ್ದರಾಮಯ್ಯ ಪುತ್ರ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮಾಅಜಿ ಸಂಸದ ಪ್ರತಾಪ್ ಸಿಂಹ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮೈಸೂರು ಪೊಲೀಸರಿಗೆ ಯತೀಮ್ದ್ರ ಸಿದ್ದರಾಮಯ್ಯ ಕಾಟ ಹೆಚ್ಚಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ವರ್ಗಾವಣೆ ಸಚಿವರಾಗಿದ್ದಾರೆ. ಪೊಲೀಸರಿಗೆ ಅವರ ಕಾಅಟ ಹೆಚ್ಚಾಗಿದೆ ಎಂದು ಆರೋಪಿಸಿದರು.

ಯಾವುದೇ ವರ್ಗಾವಣೆಯಾಅಗಬೇಕಾದರೂ ಸಿಎಂ ಪುತ್ರನಿಗೆ ತೆರಿಗೆ ಕಟ್ಟಬೇಕು. ಕಲೆಕ್ಷನ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪೈಪೋಟಿಗೆ ಇಳಿದಿದ್ದಾರೆ. ಯಾರು ಜಾಸ್ತಿ ಕಲೆಕ್ಷನ್ ಮಾಡಿ ರಾಹುಲ್ ಗಾಂಧಿಗೆ ಕೊಡುತ್ತೇವೆ ಎಂಬ ಪೈಪೋಟಿಗೆ ಇಳಿದಿದ್ದಾರೆ. ಸಿದ್ದರಾಮಯ್ಯ ಅವರ ಹೃದಯ ಕಲ್ಲಾಗಿದೆ. ಆರೋಪಿ ಯಾವ ಜಾತಿಯವನು ಎಂದು ನೋಡಿ ನಂತರ ಅವನನ್ನು ಹಿಡಿಯಬೇಕಾದ ಸ್ಥಿತಿ ಮೈಸೂರು ಪೊಲೀಸರಿಗೆ ಬಂದಿದೆ ಎಂದರು.

ಪೊಲೀಸರಿಗೆ ವರ್ಗಾವಣೆ ಕಾಟ, ಜಾತಿ ಕಾಟ ಹೆಚ್ಚಾಗಿದೆ. ಮೈಸೂರಿನಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ. ಆದರೂ ಪೊಲೀಸರು ರೇಡ್ ಮಾಡಲು ಹೆದರುತ್ತಿದ್ದಾರೆ. ಯಾವ ಸಚಿವರ, ಶಾಸಕರ ಫೋನ್ ಬರುತ್ತೆ ಅಂತ ಪೊಲೀಸರಿಗೆ ಭಯ ಶುರುವಾಗಿದೆ. ಇನ್ನು ಗೃಗಸಚಿವರಂತು ಬಿಡಿ ಸಿದ್ದರಾಮಯ್ಯ ಕುರ್ಚಿ ಖಾಲಿಯಾದರೇ ತನಗೇ ಸಿಗುತ್ತದೆ ಎಂದು ಇಲಾಖೆಯನ್ನು ಮರೆತುಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಮಗನಿಗೆ ವರ್ಗಾವಣೆ ದಂಧೆ ನಿಲ್ಲಿಸಲು ಹೇಳಿ. ಶಾಸಕರಿಗೆ ವಸೂಲಿ ನಿಲ್ಲಿಸಲು ಹೇಳಿ ಎಂದು ಕಿಡಿಕಾರಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read