ದಾವಣಗೆರೆಯಲ್ಲಿ ಘೋರ ದುರಂತ ಸಂಭವಿಸಿದ್ದು, ಸ್ನಾನ ಮಾಡುವಾಗ ಬಾಯ್ಲರ್ ಸ್ಪೋಟಗೊಂಡು 11 ವರ್ಷದ ಬಾಲಕಿ ದುರ್ಮರಣಕ್ಕೀಡಾಗಿದ್ದಾಳೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ದುರ್ಗಿಗುಡಿ ಬಡಾವಣೆಯ ಹೂವಾನಾಯ್ಕ್ ಎಂಬುವವರ ಮಗಳು ಸ್ವೀಕೃತಿ (11) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.
ನೀರು ಕಾಯಿಸಲು ಹಾಕಿದ್ದ ಬಾಯ್ಲರ್ ಸ್ಪೋಟಗೊಂಡು ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಬಾಲಕಿಯನ್ನು ಆಸ್ಪತ್ತೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಿ ಮೃತಪಟ್ಟಿದ್ದಾಳೆ. ತಂದೆ ಹೂವಾನಾಯ್ಕ್, ತಾಯಿ ಸುನೀತಾ, ಅಜ್ಜಿ ತೀರ್ಥಿಬಾಯಿ ಅವರಿಗೂ ಬೆಂಕಿ ತಗುಲಿ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.