ಶಿವಮೊಗ್ಗ: ಶಿವಮೊಗ್ಗ ನಗರದ ಗೋಪಾಳ 100 ಅಡಿ ರಸ್ತೆಯಲ್ಲಿರುವ ಚೆನ್ನಾಂಬಿಕಾ ವೈನ್ ಸ್ಟೋರ್ ಶಟರ್ ಮುರಿದು ದುಬಾರಿ ಬೆಲೆಯ ಬ್ರಾಂಡೆಡ್ ಮದ್ಯದ ಬಾಟಲಿಗಳನ್ನು ಕಳವು ಮಾಡಲಾಗಿದೆ.
ಅಕ್ಟೋಬರ್ 4ರಂದು ರಾತ್ರಿ ಅಂಗಡಿಯ ಮಾಲೀಕ ವೈನ್ ಸ್ಟೋರ್ ಬಾಗಿಲು ಹಾಕಿ ಮನೆಗೆ ತೆರಳಿದ್ದಾರೆ. ಮರುದಿನ ಬೆಳಗ್ಗೆ ಬಂದು ನೋಡಿದಾಗ ರೋಲಿಂಗ್ ಶಟರ್ ಮೀಟಿರುವುದು ಗಮನಕ್ಕೆ ಬಂದಿದೆ. ಅಂಗಡಿ ಒಳಗೆ ಪರಿಶೀಲಿಸಿದಾಗ ದುಬಾರಿ ಬೆಲೆಯ 21 ಬಗೆಯ ಮದ್ಯದ ಬಾಟಲಿಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ.
ಅಲ್ಲದೇ, ಅಂಗಡಿಯಲ್ಲಿದ್ದ ಸಿಸಿಟಿವಿ ಡಿವಿಆರ್ ಕಳವು ಮಾಡಲಾಗಿದೆ. ಅಂಗಡಿ ಮಾಲೀಕರು ತುಂಗಾ ನಗರ ಠಾಣೆ ಪೋಲೀಸರಿಗೆ ದೂರು ನೀಡಿದ್ದಾರೆ. 21 ಬಗೆಯ ಬ್ರಾಂಡೆಡ್ ಮದ್ಯದ ಬಾಟಲಿಗಳ ಮೌಲ್ಯ ಸುಮಾರು 1.49 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.