HomeLatest NewsBIG NEWS: ಯುವಕನ ಜೊತೆ ಯುವತಿ ನಾಪತ್ತೆ ಆರೋಪ: ಯುವತಿ ಸಬಂಧಿಕರಿಂದ ಪೊಲೀಸ್ ಠಾಣೆ ಎದುರೇ...

BIG NEWS: ಯುವಕನ ಜೊತೆ ಯುವತಿ ನಾಪತ್ತೆ ಆರೋಪ: ಯುವತಿ ಸಬಂಧಿಕರಿಂದ ಪೊಲೀಸ್ ಠಾಣೆ ಎದುರೇ ಚಾಕು ಇರಿತ

ಚಾಮರಾಜನಗರ: ಯುವಕನ ಜೊತೆ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿ, ಪೊಲೀಸ್ ಠಾಣೆ ಮುಂದೆಯೇ ಯುವತಿ ಸಂಬಂಧಿಕರು ಯುವಕನಿಗೆ ಚಾಕು ಇರಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಜಾಕೀರ್ ಹಾಗೂ ಆತನ ಸ್ನೇಹಿತ ಆರ್ಮುಗಮ್ ಎಂಬ ಯುವಕನಿಗೆ ಚಾಕು ಇರಿದಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಯುವತಿ ಆಯೇಷಾ ನಾಪತ್ತೆಯಾಗಿದ್ದು, ಇದಕ್ಕೆ ಮಹೇಂದ್ರ ಎಂಬಾತ ಕಾರಣ ಎಂದು ಯುವತಿ ಸಂಬಂಧಿಕರು ಶಂಕಿಸಿದ್ದಾರೆ. ಇದೇ ವೇಳೆ ಮಹೇಂದ್ರ ಸಂಬಂಧಿ ಆರ್ಮುಗಮ್ ಎಂಬಾತ ಮಹೇಂದ್ರ ಕಾಣೆಯಾಗಿದ್ದಾನೆ ಎಂದು ಗುಂಡ್ಲುಪೇಟೆ ಠಾಣೆಗೆ ದೂರು ಕೊಡಲು ಬಂದಿದ್ದಾನೆ. ಈ ವೇಳೆ ಆರ್ಮುಗಮ್ ಗೆ ಜಾಕಿರ್ ಹಾಗೂ ಆತನ ಸ್ನೇಹಿತ ಇಬ್ಬರೂ ಚಾಕು ಇರಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರ್ಮುಗಮ್ ಕುತ್ತಿಗೆ ಭಾಗದಲ್ಲಿ ಚಾಕು ಇರಿಯಲಾಗಿದೆ. ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular