ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ವಿವಾದಿತ ಐ ಲವ್ ಮೊಹಮ್ಮದ್ ಬ್ಯಾನರ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೇಡಂ ಪಟ್ಟಣದ ಬಳಿಕ ಇದೀಗ ಆಳಂದದಲ್ಲಿಯೂ ಐ ಲವ್ ಮೊಹಮ್ಮದ್ ಬ್ಯಾನರ್ ಪ್ರತ್ಯಕ್ಷವಾಗಿದೆ.
ಲಾಡ್ಲೆ ಮಶಾಕ್ ದರ್ಗಾ ಉರುಸ್ ಹಿನ್ನೆಲೆಯಲ್ಲಿ ವಿವಾದಿತ ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಲಾಡ್ಲೆ ಮಶಾಕ್ ದರ್ಗಾದ ಬಳಿಯೇ ಬ್ಯಾನರ್ ಹಾಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ವಿವಾದಿತ ಬ್ಯಾನರ್ ಗಳನ್ನು ತೆರವು ಮಾಡಿದ್ದಾರೆ.