ಶಿವಮೊಗ್ಗ: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆದಿದ್ದು, ಈ ಸಮೀಕ್ಷೆ ಹೆಸರಲ್ಲಿ ಮನೆಗೆ ನುಗ್ಗಿದ ಇಬ್ಬರು ಮಹಿಳೆ ಮೇಲೆ ಹಲ್ಲೆ ನಡೆಸಿ ದರೊಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
ಶಿವಮೊಗ್ಗದ ಅಜಾದ್ ನಗರ ಕ್ಲಾರ್ಕ್ ಪೇಟೆಯಲ್ಲಿ ಶುಕ್ರವಾರ ಘಟನೆ ನಡೆದಿದೆ. ದಿಲ್ ಶಾದ್(45) ಅವರಿದ್ದ ಮನೆಗೆ ಇಬ್ಬರು ಭೇಟಿ ನೀಡಿ ನಾವು ಜಾತಿಗಣತಿ ಮಾಡಲು ಬಂದಿದ್ದೇವೆ. ಆಧಾರ್ ಕಾರ್ಡ್ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಆಧಾರ್ ಕಾರ್ಡ್ ತರಲು ಮನೆಯೊಳಗೆ ಹೋದಾಗ ಇಬ್ಬರೂ ಮನೆಯೊಳಗೆ ನುಗ್ಗಿ ದಿಲ್ ಶಾದ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಮನೆಯಿಂದ ಹೊರಗೆ ಓಡಿ ಹೋದ ದಿಲ್ ಶಾದ್ ಇಬ್ಬರನ್ನು ಕೂಡಿ ಹಾಕಿದ್ದಾರೆ. ತಾಲಿಮಾ ಮತ್ತು ಅಸ್ಲಾಂ ಅವರು ದಿಲ್ ಶಾದ್ ಮೇಲೆ ಹಲ್ಲೆ ಮಾಡಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.