ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ಪ್ರವಾಸಿಗ ನೀರು ಪಾಲಾಗಿದ್ದಾರೆ. ಹಾಸನದ ಮಿಥುನ್ ನೀರು ಪಾಲಾದವರು ಎಂದು ಗುರುತಿಸಲಾಗಿದೆ.
ನೀರು ಪಾಲಾಗುತ್ತಿದ್ದ ಶಶಾಂಕ್ ಎಂಬುವನನ್ನು ಯುವಕರು ರಕ್ಷಣೆ ಮಾಡಿದ್ದಾರೆ. ಶಶಾಂಕ್ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬೀಚ್ ನಲ್ಲಿ ಸಾವಿರಾರು ಜನರಿಗೆ ಕೇವಲ ಮೂವರು ಲೈಫ್ ಗಾರ್ಡ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಜು ಬಾರದ ಲೈಫ್ ಗಾರ್ಡ್ ನಿಯೋಜನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಉಡುಪಿ ಜಿಲ್ಲಾಡಳಿತದ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.