HomeLatest NewsBREAKING: ದೇವರಗುಡ್ಡದ ಬಡಿಗೆ ಬಡಿದಾಟ ಜಾತ್ರೆಯಲ್ಲಿ ದುರಂತ: ಇಬ್ಬರು ದುರ್ಮರಣ: 15ಜನರಿಗೆ ಗಾಯ

BREAKING: ದೇವರಗುಡ್ಡದ ಬಡಿಗೆ ಬಡಿದಾಟ ಜಾತ್ರೆಯಲ್ಲಿ ದುರಂತ: ಇಬ್ಬರು ದುರ್ಮರಣ: 15ಜನರಿಗೆ ಗಾಯ

ದೇವರಗುಡ್ಡ: ದೇವರಗುಡ್ಡದಲ್ಲಿ ನಡೆದ ಬಡಿಗೆ ಬಡಿದಾಟ ಜಾತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ಕರ್ನಾಟಕ-ಆಂಧ್ರ ಗಡಿಭಾಗದ ದೇವರಗುಡ್ಡದ ಮಾಳ ಮಲ್ಲೇಶ್ವರ ಸನ್ನಿಧಿಯಲ್ಲಿ ನಡೆಯುವ ಬಡಿಗೆ ಬಡಿದಾಟ ಜಾತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಉತ್ಸವ ಮೂರ್ತಿಯನ್ನು ತಮ್ಮ ಊರುಗಳಿಗೆ ಒಯ್ಯಲು ಜನರು ದೊಣ್ಣೆಯಿಂದ ಬಡಿದಾಡಿಕೊಳ್ಳುವುದು ಈ ಜಾತ್ರೆಯ ಪದ್ಧತಿ.

ಅರಕೇರ-ನೇರಣಿಕೆ ಗ್ರಾಮಸ್ಥರ ನಡುವೆ ಬಡಿಗೆ ಬಡಿದಾಟ ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 15 ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular