HomeLatest NewsBIG NEWS : 'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ಕೂಡಲೇ ಈ ಕೆಲಸ ಮಾಡುವಂತೆ...

BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ಕೂಡಲೇ ಈ ಕೆಲಸ ಮಾಡುವಂತೆ ಸರ್ಕಾರ ಸೂಚನೆ.!

ಬೆಂಗಳೂರು : ಎಲ್ಲಾ ಪ್ರಮುಖ ಬ್ಯಾಂಕ್ಗಳಲ್ಲಿ ಒದಗಿಸುತ್ತಿರುವ ವೇತನ ಖಾತೆಯ ಯೋಜನೆಯ ಲಾಭವನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯನ್ನು ವೇತನ ಖಾತೆ ಯೋಜನೆಯಡಿ ಮಾರ್ಪಡಿಸಲು ಈ ಮೂಲಕ ಸರ್ಕಾರ ತಿಳಿಸಿದೆ.

ಪ್ರತಿಯೊಬ್ಬ ಸರ್ಕಾರಿ ನೌಕರರ ತಮ್ಮ ESS Login ನಲ್ಲಿ  PMJJBY ಹಾಗೂ PMSBY ಮಾಹಿತಿಯನ್ನು ತುಂಬಿ Submit ಮಾಡಲೇಬೇಕು ಎಂದು ಸೂಚನೆ ನೀಡಲಾಗಿದೆ.

ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:06/09/2023 ರನ್ವಯ, ಪ್ರತಿ ಉದ್ಯೋಗಿಗಳಿಗೆ ಎರಡು ಅಮೂಲ್ಯವಾದ ವಿಮಾ ಯೋಜನೆಗಳಾದ – ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಯನ್ನು ತೆರೆಯಲು ಕೋರಲಾಗಿದೆ. ಈ ಯೋಜನೆಯನ್ನು ತಮ್ಮ ವೇತನ ಖಾತೆ ಬ್ಯಾಂಕ್ ಮುಖಾಂತರ ಪಡೆಯಬಹುದಾಗಿದೆ. ಹೆಚ್ಚಿನ ವಿವರಕ್ಕಾಗಿ https://www.jansuraksha.gov.in/ ಲಿಂಕ್ ಅನ್ನು ಪ್ರವೇಶಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ)
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ವಾರ್ಷಿಕ ರೂ.436/-ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ) ಯಾವುದೇ ಕಾರಣದಿಂದ ಮರಣ ಸಂಭವಿಸಿದರೆ ಅವಲಂಬಿತ ಕುಟುಂಬ ಸದಸ್ಯರಿಗೆ ರೂ. 2.00 ಲಕ್ಷಗಳ ವಿಮಾ ಮೊತ್ತದ ನರೆವು. ಈ ಯೋಜನೆಯು 18 ರಿಂದ 50 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ)
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಇದು ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ರೂ. 20/-ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ). ಒಂದು ವೇಳೆ ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ರೂ. 2.00ಲಕ್ಷಗಳು ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ರೂ.1.00 ಲಕ್ಷಗಳ ವಿಮಾ ಮೊತ್ತದ ನರೆವು ಈ ಯೋಜನೆಯು 18 ರಿಂದ 70 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ. ಇವೆರಡು ಭಿಮಾ ಯೋಜನೆಗಳು ನಿಮ್ಮ ಕುಟುಂಬಕ್ಕೆ ಬಹಳ ಉಪಯುಕ್ತವಾಗುವುದು.

ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:02/11/2023 ರನ್ವಯ, ಪಿಎಂಜೆಜೆಬಿವೈ ಮತ್ತು ಪಿಎಂಎಸ್ಬಿವೈ ವಿಮಾ ವಿವರಗಳನ್ನು ಹೆಚ್ಆರ್ಎಂಎಸ್ ಇಎಸ್ಎಸ್ ಲಾಗಿನ್ https://hrmsess.karnataka.gov.in ನ ಪೋರ್ಟಲ್ನಲ್ಲಿ ದಾಖಲಿಸಲು ಸೂಚಿಸಲಾಗಿದೆ. ಅದರಂತೆ ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್ಎಸ್ ಪೋರ್ಟಲ್ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ.

https://hrmsess.karnataka.gov.in/login/loadLoginPage

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular