ಬೆಂಗಳೂರು : ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಸಮೀಕ್ಷೆ ಕಾರ್ಯದಲ್ಲಿ ಸಾರ್ವಜನಿಕರು ಭಾಗವಹಿಸುವ ಕುರಿತು ಸರ್ಕಾರ ಪ್ರಕಟಣೆ ಹೊರಡಿಸಿದೆ. ಸಮೀಕ್ಷೆ ಕಾರ್ಯದಲ್ಲಿ ಆನ್ ಲೈನ್ ನಲ್ಲಿ ಭಾಗವಹಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2025 ಸಮೀಕ್ಷೆ ಕಾರ್ಯವನ್ನು ಕರ್ನಾಟಕ ರಾಜ್ಯ ಸರಕಾರ ಈಗಾಗಲೇ ಕೈಗೊಂಡಿದ್ದು, ಸದ್ರಿ ಸಮೀಕ್ಷೆಯಲ್ಲಿ ಸಾರ್ವಜನಿಕರು ಈ ಕೆಳಕಂಡ QR Code ಅಥವಾ ಲಿಂಕ್ ನ್ನು ಉಪಯೋಗಿಸಿಕೊಂಡು ತಮ್ಮ ಮೊಬೈಲ್ ನಲ್ಲಿ ನಾಗರಿಕ ಲಾಗಿನ್ ಮೂಲಕ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭಾಗವಹಿಸಲು ಕೋರಿದೆ.
https://kscbcselfdeclaration.karnataka.gov.in
ಅವಶ್ಯವಿರುವ ದಾಖಲೆಗಳು:
1. UHID/MESCOM Account Number
3. ಚುನಾವಣಾ ಗುರುತಿನ ಚೀಟಿ ಸಂಖ್ಯೆ
2. ಪಡಿತರ ಚೀಟಿ ಸಂಖ್ಯೆ/ ಆಧಾರ್ ಸಂಖ್ಯೆ
ರಾಜ್ಯದಲ್ಲಿ ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಜಾರಿಯಲ್ಲಿದ್ದು, ಸಾರ್ವಜನಿಕರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆದಾರರನ್ನು ಕಾಯಬೇಕಾಗಿಲ್ಲ. ಆನ್ಲೈನ್ನಲ್ಲಿ ಸುಲಭ ವಿಧಾನದಲ್ಲಿ ಸ್ವತಃ ನಿಮ್ಮ ಮೊಬೈಲ್ನಲ್ಲಿ ಅರ್ಜಿ ಭರ್ತಿ ಮಾಡಬಹುದು.
ಸಾರ್ವಜನಿಕರು https://kscbcselfdeclaratioin.karnataka.gov.in ವೆಬ್ಸೈಟಿಗೆ ಭೇಟಿ ನೀಡಿ, ನಾಗರಿಕ ಎಂದು ಆಯ್ಕೆ ಮಾಡಬೇಕು. ಮೊಬೈಲ್ ನಂಬರ್ ಹಾಕಿ ಓಟಿಪಿ ಪಡೆದು, ನಮೂದಿಸಬೇಕು. ತದನಂತರ ಹೊಸ ಸಮೀಕ್ಷೆ ಆರಂಭಿಸಿ ಎಂದು ಆಯ್ಕೆ ಮಾಡಿ ನಿಮಗೆ ಕೊಟ್ಟಿರುವ ಯುಹೆಚ್ಐಡಿ ಅನ್ನು ನಮೂದಿಸಿ ಪರಿಶೀಲನೆ ಮಾಡಬೇಕು.
ಒಂದು ವೇಳೆ ಯುಹೆಚ್ಐಡಿ ಇಲ್ಲದಿದ್ದರೆ ಐ ಡೋಂಟ್ ಹ್ಯಾವ್ ಯುಹೆಚ್ಐಡಿ ಎಂದು ಕ್ಲಿಕ್ ಮಾಡಬೇಕು. ನಂತರ ಹೆಸ್ಕಾಂ ಐಡಿ ಸಂಖ್ಯೆಯನ್ನು ನಮೂದಿಸಿದ ನಂತರ ಸಮೀಕ್ಷೆಯಲ್ಲಿ ಭಾಗವಹಿಸುವವರ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು.
ತದನಂತರ ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಆಧಾರ್ ಕಾರ್ಡ್ ಆಯ್ಕೆ ಮಾಡಿದರೆ ಓಟಿಪಿ ಬರುತ್ತೆ ಅಥವಾ ಕ್ಯೂಆರ್ ಕೋಡ್ ಮುಖಾಂತರ ಫೇಸ್ ಕ್ಯಾಪ್ಚರ್ನ್ನು ಬಳಸಬಹುದು ನಂತರ ಗೆಟ್ ಡಾಟಾ ಅನ್ನು ಕ್ಲಿಕ್ ಮಾಡಿ ಮುಂದುವರೆಯಬೇಕು.