HomeLatest NewsSHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಪತ್ನಿಯ ಶೀಲಶಂಕಿಸಿ ಇಬ್ಬರು ಮಕ್ಕಳನ್ನೇ ಹತ್ಯೆಗೈದ...

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಪತ್ನಿಯ ಶೀಲಶಂಕಿಸಿ ಇಬ್ಬರು ಮಕ್ಕಳನ್ನೇ ಹತ್ಯೆಗೈದ ಪಾಪಿ ತಂದೆ.!

ಯಾದಗಿರಿ : ಪಾಪಿ ಪತಿಯೋರ್ವ ಪತ್ನಿಯ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಕೊಂದ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಶರಣಪ್ಪ ಎಂಬಾತ ಈ ಕೃತ್ಯ ಎಸಗಿದ್ದು, ತನ್ನ ಮೂವರ ಮಕ್ಕಳ ಪೈಕಿ ಇಬ್ಬರನ್ನು ಕೊಂದಿದ್ದಾನೆ. ಕೊಲೆಯಾದ ಮಕ್ಕಳನ್ನು ಭಾರ್ಗವ್ (5) ಹಾಗೂ ಸಾನ್ವಿ (3) ಎಂದು ಗುರುತಿಸಲಾಗಿದೆ. ಹಿರಿಯ ಮಗ ಹೇಮಂತ್ (8) ಕೊಲೆಗೂ ಶರಣಪ್ಪ ಯತ್ನಿಸಿದ್ದು, ಆತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಅನುಮಾನ ಪಟ್ಟ ಪತಿ ತನ್ನ ಪುಟ್ಟ ಮಕ್ಕಳನ್ನು ಕೊಂದು ಎಸ್ಕೇಪ್ ಆಗಿದ್ದಾನೆ. ಏನೂ ಅರಿಯದ ಮುಗ್ದ ಕಂದಮ್ಮಗಳು ಜೀವ ಬಿಟ್ಟಿದೆ. ಮಕ್ಕಳನ್ನು ಕೊಲೆ ಮಾಡಿ ಆರೋಪಿ ಶರಣಪ್ಪ ಎಸ್ಕೇಪ್ ಆಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳದಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಯಾದಗಿರಿ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular