BREAKING : ಪತ್ನಿ ಮೇಲೆ ಗುಂಡು ಹಾರಿಸಿದ ಕೊಡಗಿನ ಯೋಧ : ಮಹಿಳೆ ಸ್ಥಿತಿ ಗಂಭೀರ.!

ಕೊಡಗು : ಪತ್ನಿ ಮೇಲೆ ಭಾರತೀಯ ಸೇನೆಯ ಯೋಧನೋರ್ವ ಗುಂಡು ಹಾರಿಸಿದ್ದು, ಮಹಿಳೆ ಸ್ಥಿತಿ ಗಂಭೀರವಾಗಿದೆ.

ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಸಮೀಪದ ಕೊಣಗೇರಿಯಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ದೀಪಿಕಾ ದೇಚಮ್ಮ (32) ಸ್ಥಿತಿ ಗಂಭೀರವಾಗಿದೆ. ಗುಂಡು ಹಾರಿಸಿದ ಯೋಧ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಕೌಟುಂಬಿಕ ಕಲಹದಿಂದ ಇಬ್ಬರ ನಡುವೆ ಜಗಳ ನಡೆದಿದ್ದು, ಕೋಪಗೊಂಡ ಯೋಧ ಕಾರ್ಯಪ್ಪ ವಿನು ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಮಹಿಳೆಯನ್ನ ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ . ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

  • ಹೌದು (54%, 210 Votes)
  • ಇಲ್ಲ (33%, 129 Votes)
  • ಹೇಳಲಾಗುವುದಿಲ್ಲ (12%, 48 Votes)

Total Voters: 387

Loading ... Loading ...

Most Read