ಶಿವಮೊಗ್ಗ : ಭದ್ರಾ ಕಾಲುವೆಗೆ ತಳ್ಳಿ ಪ್ರಿಯಕರನೇ ಪ್ರೇಯಸಿಯನ್ನ ಹತ್ಯೆಗೈದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಯಕ್ಕಂದ ಗ್ರಾಮದ ಬಳಿ ಭದ್ರಾ ಕಾಲುವೆಯಲ್ಲಿ ನಡೆದಿದೆ.
ಪ್ರೇಯಸಿ ಸ್ವಾತಿಯನ್ನ ಕೊಲೆ ಮಾಡಿದ ಸೂರ್ಯ ಎಂಬ ಯುವಕ ಬಳಿಕ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಘಟನೆ ಸಂಬಂಧ ಸೂರ್ಯ ಹಾಗೂ ಆತನ ತಂದೆ ಸ್ವಾಮಿ ವಿರುದ್ಧ ಕೇಸ್ ದಾಖಲಾಗಿದೆ.
ಸೂರ್ಯ , ಸ್ವಾತಿ ಇಬ್ಬರೂ ಕೂಡ ಪದವಿ ವ್ಯಾಸಂಗ ಮಾಡುತ್ತಿದ್ದರು.ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ. ಆದರೆ ಸೂರ್ಯ ಮದುವೆ ಆಗೋಣ ಎಂದು ಹಠ ಹಿಡಿದಿದ್ದಾರೆ. ಆದರೆ ಸ್ವಾತಿ ಪೋಷಕರು ಮೊದಲು ಓದು ಮುಗಿಯಲಿ, ಅಲ್ಲಿವರೆಗೆ ಮದುವೆ ಬೇಡ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಸ್ವಾತಿಯನ್ನು ಸೂರ್ಯ ಕಾಲುವೆ ಬಳಿ ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು. ಈ ಸಂಬಂಧ ಯುವಕ ಸೂರ್ಯ ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಆತನ ತಂದೆ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.