ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯವು ಅಕ್ಟೋಬರ್, 07 ರವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಸಮೀಕ್ಷೆ ಕಾರ್ಯವನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸುಗಮವಾಗಿ ನಿರ್ವಹಣೆ ಮಾಡುವ ಹಾಗೂ ಸಾರ್ವಜನಿಕರಿಂದ ಬರುವ ಮಾಹಿತಿ/ದೂರು/ ಆಕ್ಷೇಪಣೆ/ಸಲಹೆ ಇತ್ಯಾದಿ ಬಗ್ಗೆ ಸ್ವೀಕರಿಸಲಾಗುತ್ತಿರುವ ಕರೆಗಳಿಗೆ ಸೂಕ್ತ ಉತ್ತರವನ್ನು ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನೊಳಗೊಂಡಂತೆ ಸಹಾಯವಾಣಿ ತಂಡವನ್ನು ರಚಿಸಿ ಆದೇಶಿಸಿದೆ. ಈ ತಂಡವು ಕಚೇರಿಯ ಅವಧಿಯಲ್ಲಿ ಕಚೇರಿಯ ಕೆಲಸದೊಂದಿಗೆ ಸಹಾಯವಾಣಿಯ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದೆ.
ಕೊಡಗು ಜಿಲ್ಲಾ ಮಟ್ಟದ ಸಹಾಯವಾಣಿ ಕೇಂದ್ರ: ಶಿವಶಂಕರ, ಕಚೇರಿ ವ್ಯವಸ್ಥಾಪಕರು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ ಮಡಿಕೇರಿ. ದೂ.ಸಂ. 9845041338, ಕುಮಾರಿ.ಅಮೃತ ಡೇಟಾ ಎಂಟ್ರಿ ಆಪರೇಟರ್ (ಹೊ.ಸಂ) ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ ಮಡಿಕೇರಿ ದೂ.ಸಂ. 7483864190.
ಮಡಿಕೇರಿ ತಾಲ್ಲೂಕು ಮಟ್ಟದ ಸಹಾಯವಾಣಿ ಕೇಂದ್ರ: ಶ್ವೇತಾ, ಪ್ರಥಮ ದರ್ಜೆ ಸಹಾಯಕರು ದೂ.ಸಂ.9481771612 ಹಾಗೂ .ಪದ್ಮವತಿ, ಡೇಟಾ ಎಂಟ್ರಿ ಆಪರೇಟರ್. (ಹೊ.ಸಂ) ದೂ.ಸಂ. 9008195719.
ಕುಶಾಲನಗರ ತಾಲ್ಲೂಕು ಮಟ್ಟದ ಸಹಾಯವಾಣಿ ಕೇಂದ್ರ: ಸುಕನ್ಯ, ನಿಲಯ ಮೇಲ್ವಿಚಾರಕರು ದೂ.ಸಂ. 7760760241 ಹಾಗೂ ಶರಣಪ್ಪ ಬಿರಾದರ, ಅಡುಗೆಯವರು ದೂ.ಸಂ. 9008241175.
ಸೋಮವಾರಪೇಟೆ ತಾಲ್ಲೂಕು ಮಟ್ಟದ ಸಹಾಯವಾಣಿ ಕೇಂದ್ರ: ಆನಂದ ವೈ.ಡಿ. ನಿಲಯ ಮೇಲ್ವಿಚಾರಕರು ದೂ.ಸಂ. 8105261185, ಶಿಲ್ಪ.ಟಿ.ಎಂ ಡೇಟಾ ಎಂಟ್ರಿ ಆಪರೇಟರ್ (ಹೊ.ಸಂ). ದೂ.ಸಂ. 9980403235.
ವಿರಾಜಪೇಟೆ ತಾಲ್ಲೂಕು ಮಟ್ಟದ ಸಹಾಯವಾಣಿ ಕೇಂದ್ರ: .ನಾಗರಾಜು ಎಚ್.ಜೆ., ನಿಲಯ ಮೇಲ್ವಿಚಾರಕರು ದೂ.ಸಂ. 9844531040 ಹಾಗೂ ನಂದಿನಿ ಟಿ.ಡಿ, ಅಡುಗೆಯವರು ದೂ.ಸಂ. 8892281563.
ಪೊನ್ನಂಪೇಟೆ ತಾಲ್ಲೂಕು ಮಟ್ಟದ ಸಹಾಯವಾಣಿ ಕೇಂದ್ರ: .ಶ್ರುತಿ ಮ್ಯಾಥ್ಯು. ಪ್ರಥಮ ದರ್ಜೆ ಸಹಾಯಕರು ದೂ.ಸಂ. 9606127417 ಹಾಗೂ ಶಾಕೀರ್, ಡಾಟಾ ಎಂಟ್ರಿ ಆಪರೇಟರ್.(ಹೊ.ಸಂ) ದೂ.ಸಂ. 8095684146 ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವರು ತಿಳಿಸಿದ್ದಾರೆ.