HomeLatest Newsಸರ್ಕಾರಿ ನೌಕರರಿಗೆ ದಸರಾ ಗಿಫ್ಟ್: ಕುಟುಂಬದವರಿಗಾಗಿ ನಗದು ರಹಿತ ಚಿಕಿತ್ಸೆಗೆ ಅ. 1 ರಿಂದ ಆರೋಗ್ಯ...

ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್: ಕುಟುಂಬದವರಿಗಾಗಿ ನಗದು ರಹಿತ ಚಿಕಿತ್ಸೆಗೆ ಅ. 1 ರಿಂದ ಆರೋಗ್ಯ ಸಂಜೀವಿನಿ ಜಾರಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹು ನಿರೀಕ್ಷಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಕೊಡುಗೆ ನೀಡಲಾಗಿದೆ.

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ಯೋಜನೆ ಅಕ್ಟೋಬರ್ 1ರಿಂದ ಜಾರಿಗೊಳಿಸಿ ಆದೇಶಿಸಲಾಗಿದೆ. ಈ ಯೋಜನೆಗೆ ವಾರ್ಷಿಕ ಒಂದು ಸಾವಿರ ಕೋಟಿ ರೂ. ವೆಚ್ಚದ ಅಂದಾಜಿದ್ದು, ಸರ್ಕಾರ ಹೆಚ್ಚುವರಿ 500 ಕೋಟಿ ರೂ. ಭರಿಸಲಿದೆ. ಸರ್ಕಾರಿ ನೌಕರರು ಮಾಸಿಕ ವಂತಿಕೆ ರೂಪದಲ್ಲಿ 500 ಕೋಟಿ ರೂ. ಪಾವತಿಸಲಿದ್ದಾರೆ.

ಈ ಯೋಜನೆಗೆ ನೌಕರರು ಒಳಪಡಲು ಅಥವಾ ಒಳಪಡದೆ ಇರಲು ಇಚ್ಚಿಸಿದಲ್ಲಿ ಲಿಖಿತ ಘೋಷಣೆ ಸಲ್ಲಿಸಲು ಅಕ್ಟೋಬರ್ 18ರ ಗಡುವು ನೀಡಲಾಗಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಜಾರಿ ದಿನಾಂಕದಿಂದ ಪ್ರಸ್ತುತ ಜಾರಿಯಲ್ಲಿರುವ ಜ್ಯೋತಿ ಸಂಜೀವಿನಿ ಯೋಜನೆ ಸ್ಥಗಿತವಾಗಲಿದೆ. ಸರ್ಕಾರಿ ನೌಕರರ ಪತಿ/ ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ವಂತಿಕೆ ಪಾವತಿಸುವ ಬಗ್ಗೆ ಅವರೇ ತೀರ್ಮಾನಿಸಿ ತಿಳಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಸಿಕ ವಂತಿಕೆಯನ್ನು ಪಾವತಿಸುವ ವಿಧಾನ:

ಯೋಜನೆಯಡಿ ಸರ್ಕಾರಿ ನೌಕರರ ವೇತನದಿಂದ ಕಡಿತಗೊಳಿಸಲ್ಪಟ್ಟ ವಂತಿಕೆಯನ್ನು ಎಲ್ಲಾ ಡಿಡಿಓಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಈ ಉದ್ದೇಶಕ್ಕಾಗಿಯೇ ತೆರೆಯಲಾದ ಬ್ಯಾಂಕ್ ಖಾತೆಗೆ ಖಜಾನೆ-2 ರಲ್ಲಿ ಸೃಜಿಸಲಾಗುವ ಸ್ವೀಕೃತಿದಾರರ ಐಡಿ (ID) ಗೆ ಜಮಾ ಮಾಡತಕ್ಕದ್ದು. (ಬ್ಯಾಂಕ್ ಖಾತೆ ವಿವರಗಳನ್ನು ಡಿಡಿಓಗಳಿಗೆ HRMS ಮುಖಾಂತರ ತಿಳಿಸಲಾಗುವುದು).

ಸರ್ಕಾರಿ ನೌಕರನ ಪತಿ ಅಥವಾ ಪತ್ನಿ ಕೂಡ ಸರ್ಕಾರಿ ನೌಕರರಾಗಿರುವಲ್ಲಿ ವಂತಿಕೆಯನ್ನು ಪಾವತಿಸುವ ಬಗ್ಗೆ: ವಂತಿಕೆಯನ್ನು ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಪಾವತಿಸುವ ಬಗ್ಗೆ ಸಂಬಂಧಪಟ್ಟ ಸರ್ಕಾರಿ ನೌಕರರೇ ತೀರ್ಮಾನಿಸಿ ಸಂಬಂಧಿಸಿದ ಡಿಡಿಒ ರವರಿಗೆ ಮಾಹಿತಿ ನೀಡುವುದು.

HRMS ವ್ಯಾಪ್ತಿಯಲ್ಲಿರದ (ಬೇರೆ ಇಲಾಖೆಗಳಲ್ಲಿ, ಸಾರ್ವಜನಿಕ ಸಂಸ್ಥೆಗಳಲ್ಲಿ ನಿಯೋಜನೆ, ಅನ್ಯ ಸೇವೆ) ರಾಜ್ಯ ಸರ್ಕಾರಿ ನೌಕರರ ವಂತಿಕೆ ಕಟಾವಣೆ: ಅಂತಹ ನಿಯೋಜಿತ ನೌಕರರ ಮಾಸಿಕ ವೇತನದಲ್ಲಿ ವಂತಿಕೆಯನ್ನು ಕಟಾಯಿಸಿ, ಸಂಸ್ಥೆಯಿಂದ ನೇರವಾಗಿ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದು.

ವಂತಿಕೆ ಕಟಾವಣೆ ಪ್ರಾರಂಭಿಸುವುದು:

ಯೋಜನೆಗೆ ಮಾಸಿಕ ವಂತಿಕೆಯನ್ನು ಮೇ 2025 ರಿಂದ ಸ್ವಯಂಚಾಲಿತವಾಗಿ ಕಟಾಯಿಸಲಾಗುವುದೆಂದು ಮೇಲೆ ಓದಲಾದ (6)ರ ದಿನಾಂಕ: 19.04.2025 ರ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈ ಅಂಶವನ್ನು ಮಾರ್ಪಡಿಸಿ ವಂತಿಕೆಯನ್ನು ಅಕ್ಟೋಬರ್ 2025ರ ವೇತನದಿಂದ ಮುಂದಿನಂತೆ ಕಟಾಯಿಸುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular