HomeLatest NewsBIG NEWS: ಪ್ರವಾಸಕ್ಕೆ ಹೋಗಿದ್ದ ವೇಳೆ ದುರಂತ: ಸಮುದ್ರದಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು!

BIG NEWS: ಪ್ರವಾಸಕ್ಕೆ ಹೋಗಿದ್ದ ವೇಳೆ ದುರಂತ: ಸಮುದ್ರದಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು!

ಕಾರವಾರ‍: ಪ್ರವಾಸಕ್ಕೆಂದು ಮುರುಡೆಷ್ವರಕ್ಕೆ ಹೋಗಿದ್ದ ವೇಳೆ ಬಾಲಕನೊಬ್ಬ ಕಡಲ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೃತಿಕ್ ರೆಡ್ಡಿ (8) ಮೃತ ಬಾಲಕ. ಬೆಂಗಳೂರಿನ ಬಿದರಹಳ್ಳಿಯ ನಿವಾಸಿ. ಬಿದರಹಳ್ಳಿಯ ಕೆ.ರವಿರೆಡ್ಡಿ ಕುಟುಂಬ ಸಮೇತರಾಗಿ ಮುರುಡೆಶ್ವರಕ್ಕೆ ಪ್ರವಾಸಕ್ಕೆ ತೆರಳಿದ್ದರು. ಕಡಲತೀರದಲ್ಲಿ ಆಟವಾಡಲೆಂದು ಕುಟುಂಬ ಸದಸ್ಯರು ಹೋಗಿದ್ದಾರೆ. ಈ ವೇಳೆ ಸಮುದ್ರದಲ್ಲಿ ಇಳಿದಿದ್ದ ವೇಳೆ ಬಾಲಕ ಅಲೆಗಳ ಹೊಡೆತಕ್ಕೆ ಸಿಲುಕಿದ್ದಾನೆ. ಆತನನ್ನು ರಕ್ಷಿಸಲೆಂದು ಮಹಿಳೆ ವಸಾಂತಾ ಕೂಡ ಯತ್ನಿಸಿದ್ದಾರೆ. ಆದರೆ ಅವರೂ ಅಲೆಗಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು.

ಲೈಫ್ ಗಾರ್ಡ್ ಗಳ ಸಹಾಯದಿಂದ ವಸಂತಾ ಅವರನ್ನು ರಕ್ಷಿಸಲಾಗಿದೆ. ಆದರೆ 8 ವರ್ಷದ ಬಾಲಕ ಸಮುದ್ರಪಾಲಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular