BREAKING : ಮೈಸೂರು ದಸರಾ : ಚಾಮುಂಡೇಶ್ವರಿ ಪೂಜೆ ವೇಳೆ ಭಾವುಕರಾದ ‘ಬಾನು ಮುಷ್ತಾಕ್’ |WATCH VIDEO

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಚಾಲನೆ ನೀಡಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡ ಅದಿದೇವತೆ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವ ಉದ್ಘಾಟಿಸಿದರು.

ಇದಕ್ಕೂ ಮುನ್ನ ಚಾಮುಂಡೇಶ್ವರಿ ಬೆಟ್ಟದಲ್ಲಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಾನು ಮುಷ್ತಾಕ್ ಭಾವುಕರಾಗಿದ್ದು, ಅವರ ಕಣ್ಣಂಚಲಿ ಬಂದ ನೀರನ್ನ ಒರಿಸಿಕೊಂಡಿದ್ದಾರೆ.

ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಲೇಖಕಿ ಬಾನು ಮುಷ್ತಾಕ್, ಚಾಮುಂಡಿ ತಾಯಿ ಕೃಪಾಶಿರ್ವಾದದಿಂದ ನಾನು ದಸರಾ ಉದ್ಘಾಟಿಸಿದ್ದೇನೆ. ಬೂಕರ್ ಪ್ರಶಸ್ತಿ ಬಂದರೆ ನನ್ನನ್ನು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರುವುದಾಗಿ ನನ್ನ ಆಪ್ತ ಸ್ನೇಹಿತೆಯೊಬ್ಬಳು ಹರಕೆ ಹೊತ್ತಿದ್ದಳು. ಆದರೆ ಪ್ರಶಸ್ತಿ ಬಂದ ಬಳಿಕ ನನಗೆ ಬರಲು ಸಾಧ್ಯವಾಗಿರಲಿಲ್ಲ. ಈಗ ಕರ್ನಾಟಕ ಸರ್ಕಾರದ ಮೂಲಕವಾಗಿ ತಾಯಿ ಚಾಮುಂಡಿ ದೇವೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ. ಇದು ನನ್ನ ಜೀವನದ ಗೌರವದ ಘಳಿಗೆ ಎಂದು ಹೇಳಿದರು.

ನಾವೆಲ್ಲರೂ ಒಂದೇ ಗಗನಡಿಯ ಪಯಣಿಗರು. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿ ಯಾರನ್ನೂ ದೂರ ತಳ್ಳುವುದಿಲ್ಲ. ಮನುಷ್ಯ ಮಾತ್ರ ಗಡಿಗಳನ್ನು ಹಾಕಿಕೊಳ್ಳುತ್ತಾನೆ. ನಾವೇ ಈ ಗಡಿಗಳನ್ನು ಅಳಿಸಿ ಹಾಕಿಕೊಳ್ಳಬೇಕು ಎಂದು ತಿಳಿಸಿದರು. ತಾಯಿ ಚಾಮುಂಡಿ ಶಕ್ತಿಯ, ಧೈರ್ಯದ, ಮಮತೆಯ ಸಂಕೇತ. ನಮ್ಮೊಳಗಿನ ದ್ವೇಷ, ಅಸಹಿಷ್ಣತೆಯನ್ನು ನಾಶ ಮಾಡಲಿ. ದಸರಾ ಶಾಂತಿಯ ಹಬ್ಬ, ಇದು ಸರ್ವ ಜನಾಂಗದ ಶಾಂತಿಯ ತೋಟ. ಈ ನೆಲದ ಸುಗಂಧದ ಐಕ್ಯತೆ ಆಗಲಿ ಎಂದರು. ದಸರಾ ಕೇವಲ ಅಮೈಸೂರು, ನಾಡು, ದೇಶಕ್ಕೆ ಮಾತ್ರ ಸೀಮಿತವಾಗದೇ ಇಡೀ ಪ್ರಪಂಚದಾದ್ಯಂತ ನೆಲೆ ಕಂಡುಕೊಳ್ಳಲಿ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read