HomeLatest Newsಸಹಜೀವನದಲ್ಲಿದ್ದ ಹಿಂದೂ- ಮುಸ್ಲಿಂ ಜೋಡಿ ಮನೆ ಮೇಲೆ ದಾಳಿ ಮಾಡಿ ತಲೆ ಬೋಳಿಸಿದ ನಾಲ್ವರು ಅರೆಸ್ಟ್

ಸಹಜೀವನದಲ್ಲಿದ್ದ ಹಿಂದೂ- ಮುಸ್ಲಿಂ ಜೋಡಿ ಮನೆ ಮೇಲೆ ದಾಳಿ ಮಾಡಿ ತಲೆ ಬೋಳಿಸಿದ ನಾಲ್ವರು ಅರೆಸ್ಟ್

ರಾಮನಗರ(ಬೆಂಗಳೂರು ದಕ್ಷಿಣ): ಸಹಜೀವನದಲ್ಲಿದ್ದ ಹಿಂದೂ, ಮುಸ್ಲಿಂ ಜೋಡಿಯ ತಲೆ ಬೋಳಿಸಿದ ಐವರನ್ನು ಬಂಧಿಸಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ಹಿಂದೂ ಸಮುದಾಯದ ಪುರುಷ ಮತ್ತು ಮುಸ್ಲಿಂ ಸಮುದಾಯದ ಮಹಿಳೆ ಪರಸ್ಪರ ಸಹಜೀವನ ನಡೆಸುತ್ತಿರುವುದನ್ನು ವಿರೋಧಿಸಿದ ಮುಸ್ಲಿಂ ಯುವಕರ ಗುಂಪು ಇಬ್ಬರ ಮೇಲೆ ಹಲ್ಲೆ ಮಾಡಿ ತಲೆ ಬೋಳಿಸಿ ಸಾರ್ವಜನಿಕವಾಗಿ ಅಪಮಾನಿಸಿದ ಘಟನೆ ಕನಕಪುರದ ಇಂದಿರಾ ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕನಕಪುರದ ಇಂದಿರಾ ನಗರದ ನಿವಾಸಿ ಹಿಂದೂ ಧರ್ಮದವರಾಗಿದ್ದು, ಮಹಿಳೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಆತನ ಪತ್ನಿ ಸಾವನ್ನಪ್ಪಿದ್ದು, ಮಹಿಳೆ ಪತಿಯಿಂದ ದೂರವಾಗಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಕೊಂಡು ಜೊತೆಯಲ್ಲಿ ಸುತ್ತಾಡುವುದನ್ನು ಸಹಿಸದ ಮುಸ್ಲಿಂ ಸಮುದಾಯದ ಯುವಕರು ಕೃತ್ಯ ಎಸಗಿದ್ದಾರೆ. ಮಹಿಳೆಯ ಮನೆಯವರು ಕೆಲ ಯುವಕರೊಂದಿಗೆ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಇಬ್ಬರ ತಲೆ ಬೋಳಿಸಿದ್ದಾರೆ. ವ್ಯಕ್ತಿ ಮತ್ತು ಮಹಿಳೆಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶೇಕ್ ಕಬೀರ್, ಸುಹೇಲ್, ಸೈಯದ್, ನವಾಜ್ ಖಾನ್ ಸೇರಿ ಐವರನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular