ಬೀದರ್: ಮನೆಗೆ ನುಗ್ಗಿದ ಖದೀಮನೊಬ್ಬ ಮಾತು ಬಾರದ ಯುವತಿಯ ಬಾಯಿಗೆ ಬಟ್ಟೆ ತುರುಕಿ ಅತ್ಯಚಹಾರಕ್ಕೆ ಯತ್ನಿಸಿದ್ದು, ಯುವತಿಯ ತಾಯಿ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯುವತಿಯ ತಾಯಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ಆರೋಪಿ, ಯುವತಿಯ ಬಾಯಿಗೆ ಬಟ್ಟೆ ತುರುಕಿ ವಿಕೃತಿ ಮೆರೆದಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಷ್ಟರಲ್ಲಿ ಯುವತಿ ತಾಯಿ ಮನ್ನೆಗೆ ಬಂದಿದ್ದು, ತಾಯಿಯನ್ನು ತಳ್ಳಿ ಆರೋಪಿ ಪರಾರಿಯಾಗಿದ್ದಾನೆ.
ಮಹಿಳೆ ನೀಡಿರುವ ದೂರುನ ಮೇರೆಗೆ ಹಳ್ಳಿಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಬು ಪಾಷಾ ಎಂದು ಗುರುತಿಸಲಾಗಿದೆ.