ದಾವಣಗೆರೆ: ಜಾತಿಗಣತಿ ಸಮೀಕ್ಷೆ ವಿಚಾರವಾಗಿ ದಾವಣಗೆರೆ ಜಿಲ್ಲೆಯ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಗಲಾಟೆ ನಡೆದಿದ್ದು, ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದೆ.
ಕುರುಬರನ್ನು ಎಸ್ ಟಿಗೆ ಸೇರಿಸುವುದನ್ನು ವಿರೋಧಿಸಿ ನಡೆದಿದ್ದ ಸಭೆಯಲ್ಲಿ ಕಾಂಗ್ರೆಸ್ ಸಂಸದ ತುಕಾರಾಂ ಹಾಗೂ ಬಿಜೆಪಿ ನಾಯಕ ಬಂಗಾರು ಹನುಮಂತು ನಡುವೆ ವಾಗ್ವಾದ ನಡೆದಿದ್ದು, ಇಬ್ಬರು ನಾಯಕರು ಕಿತ್ತಾಡಿಕೊಂಡಿದ್ದಾರೆ. ಪ್ರಸನ್ನಾನಂದಪುರಿ ಶ್ರೀಗಳ ಎದುರಲ್ಲೇ ನಾಯಕರು ಹಾಗೂ ಬೆಂಬಲಿಗರು ಕಿತ್ತಾಡಿಕೊಂಡಿದ್ದಾರೆ.
ಗಲಾಟೆ ತಾರಕಕ್ಕೇರಿದ್ದು, ಸ್ವಾಮೀಜಿಗಳು ಇಬ್ಬರು ನಾಯಕರನ್ನು ಸಮಾಧಾನಪಡಿಸಲು ಹರಸಾಹಸಪಟ್ಟಿದ್ದಾರೆ. ಒಟ್ಟಾರೆ ಸೆ.22ರಿಂದ ರಾಜ್ಯದಲ್ಲಿ ಆರಂಭವಾಗಲಿರುವ ಜಾತಿಗಣತಿ ಸಮೀಕ್ಷೆ ತೀವ್ರ ವಿವಾದಕ್ಕೆ ಕಾರಣಗುತ್ತಿದ್ದು, ಆರಂಭದಲ್ಲಿಯೇ ಗಲಾಟೆ ಶುರುವಾಗಿದೆ.