ನವದೆಹಲಿ: ಕರ್ನಾಟಕದ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ. ಹಲವಾರು ನಕಲಿ ಮತದಾನಗಳು ನಡೆದಿವೆ. ಕಾಂಗ್ರೆಸ್ ಮತರಾರರನ್ನು ಟಾರ್ಗೆಟ್ ಮಾಡಿ ಮತಪಟ್ಟಿಯಿಂದ ಅವರ ಹೆಸರು ಡಿಲಿಟ್ ಮಾಡಿ ಬೇರೆ ರಾಜ್ಯಗಳಿಂದ ಬಂದು ನಕಲಿ ಮಾತದಾನ ಮಾಡಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಕಳೆದ ಬಾರಿ ನಕಲಿ ಮತದಾರರ ಪಟ್ಟಿ ಬಗ್ಗೆ ಹೇಳಿದ್ದೆ. ಈ ಬಾರಿ ಮತಗಳ್ಳತನ ಹೇಗೆ ಆಗಿದೆ ಹಾಗೂ ಯಾವರೀತಿ ನಕಲಿ ಮತದಾನ ಮಾಡಲಾಗಿದೆ ಎಂಬುದನ್ನು ವಿವರಿಸುತ್ತೇನೆ ಎಂದು ವಿವರಿಸಿದರು.
ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಮತಗಳ್ಳತನವಾಗಿದೆ. ಹಲವಾರು ಕಾಂಗ್ರೆಸ್ ಮತದಾರರ ಹೆಸರನ್ನೇ ಮತಟ್ಟಿಯಿಂದ ಡಿಲಿಟ್ ಮಾಡಲಾಗಿದೆ. 2023ರ ಚುನಾವಣೆಯಲ್ಲಿ 6018 ವೋಟ್ ಗಳನ್ನು ಡಿಲಿಟ್ ಮಾಡಲಾಗಿದೆ. ಕಾಂಗ್ರೆಸ್ ಮತದಾರರನ್ನು ಟಾರ್ಗೆಟ್ ಮಾಡಿ ಈ ಕೃತ್ಯವೆಸಗಿದ್ದಾರೆ.
ಬೂತ್ ನಂ 37ರಲ್ಲಿ ಗೋದಾಬಾಯ್ ಅವರ ಹೆಸರು ಡಿಲಿಟ್ ಮಾಡಲಾಗಿದೆ. ಗೋದಾಬಾಯ್ ಹೆಸರಲ್ಲಿ 12 ನಕಲಿ ಮಾತದಾನಗಳು ನಡೆದಿವೆ. ಬೇರೆ ಬೇರೆ ರಾಜ್ಯಗಳಿಂದ ಬಂದು ಮತದಾನ ಮಾಡಿದ್ದಾರೆ. ಅದೇ ರೀತಿ ಸೂರ್ಯಕಾಂತ್ ಅವರ ಹೆಸರನ್ನೂ ತೆಗೆದುಹಾಕಿದ್ದಾರೆ. ಸೂರ್ಯಕಾಂತ್ ಹೆಸರಿನ ಮೇಲೆ 12 ಜನರ ಹೆಸರು ಡಿಲಿಟ್ ಆಗಿದೆ. ಸೂರ್ಯಕಾಂತ್ ಅವರಿಗೆ ಯಾವುದೇ ಮಾಹಿತಿ ನೀಡದೇ ಡಿಲಿಟ್ ಮಾಡಲಾಗಿದೆ. ಇದೇ ರೀತಿ ಬಬಿತಾ ಸೇರಿದಂತೆ ಹಲವು ಮತದಾರರ ಹೆಸರು ಡಿಲಿಟ್ ಮಾಡಲಾಗಿದೆ. ಇನ್ನು ಹಲವೆಡೆ ನಕಲಿ ಮತದಾನ ನಡೆದಿದೆ ಎಂದು ಹೇಳಿದರು.
ಮಹಾರಾಷ್ಟ್ರದ ರಾಜೌರಾದಲ್ಲಿಯೂ ನಕಲಿ ಮತದಾನ ನಡೆದಿದೆ. ಮಹಾರಾಷ್ಟ್ರದಲ್ಲಿ 6080 ಮತದಾರರ ಹೆಸರು ಸೇರಿಸಲಾಗಿದೆ. ಇದ್ಯಾವುದೂ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರಿಗೆ ಗೊತ್ತಾಗಿಲ್ಲವೇ? ಮತಗಳ್ಳತನ ನಡೆದಿದೆ ಎಂದು 16 ಬಾರಿ ನಾವು ಚುನಾವಣಾ ಆಯೋಗಕ್ಕೆ ಪತ್ರ ಬರೆದರೂ ಉತ್ತರ ನಿಡಿಲ್ಲ. ಅದರ ಬದಲು ನಕಲಿ ಮತದಾರರನ್ನು, ಮತಗಳ್ಳರನ್ನು ರಕ್ಷಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡಿದೆ ಎಂದು ಆರೋಪಿಸಿದರು.