BREAKING: ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಬಂಗ್ಲಗುಡ್ಡದಲ್ಲಿ ಮೂಳೆಗಳ ಜೊತೆ ಹಗ್ಗ-ಸೀರೆ ಪತ್ತೆ: ನೇಣುಬಿಗಿದಿರುವ ಅನುಮಾನ!

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ಬಂಗ್ಲಗುಡ್ಡ ಪ್ರದೇಶದಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಸೌಜನ್ಯಾ ಮಾವ ವಿಠಲಗೌಡ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಬಂಗ್ಲಗುಡ್ಡದ ದಟ್ಟ ಅರಣ್ಯದೊಳಗೆ ಶೋಧ ನಡೆಸಲಾಗಿದ್ದು, ಈ ವೇಳೆ 5 ಕಡೆ ಮೂಳೆಗಳು ಹಾಗೂ ಹವವು ವಸ್ತುಗಳು ಪತ್ತೆಯಾಗಿವೆ.

ಬಂಗ್ಲಗುಡ್ಡದಲ್ಲಿ ಒಂದು ಅಸ್ಥಿಪಂಜರದ ಪಕ್ಕದಲ್ಲೇ ಹಿರಿಯ ನಾಗರಿಕರ ಕಾರ್ಡ್ ಪತ್ತೆಯಾಗಿದೆ. ಅಲ್ಲದೇ ಮರದಲ್ಲಿ ಎರಡು ಹಗ್ಗ ಮತ್ತು ಒಂದು ಸೀರೆ ಸಿಕ್ಕಿದ್ದು ನೇಣುಬಿಗಿದ ಅನುಮಾನ ವ್ಯಕ್ತವಾಗಿದೆ.

ಎಸ್ ಐಟಿ ಮಹಜರು ವೇಳೆ ಪತ್ತೆಯಾದ ವಸ್ತುಗಳನ್ನು ಸೀಲ್ ಮಾಡಿ ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಂಡಿದ್ದಾರೆ. ಸೋಕೋ ಟೀಂ ಹಾಗೂ ಎಫ್ ಎಸ್ ಎಲ್ ಟೀಂ ವಸ್ತುಗಳನ್ನು ಸಂಗ್ರಹಿಸಿವೆ.

ಬಂಗ್ಲಗುಡ್ಡದಲ್ಲಿ ಬುಧವಾರ 5 ಕಡೆ ಬುರುಡೆ, ಮೂಳೆಗಳು ಪತ್ತೆಯಾಗಿದ್ದು, ಭೂಮಿ ಮೇಲ್ಭಾಗದಲ್ಲಿಯೇ ಈ ಮೂಳೆಗಳು ಪತ್ತೆಯಾಗಿವೆ. ಇದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read