ಅಮೆರಿಕ : ಬುಧವಾರ ಮಧ್ಯಾಹ್ನ ಗ್ರಾಮೀಣ ಮಧ್ಯ ಪೆನ್ಸಿಲ್ವೇನಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಗುಂಡು ಹಾರಿಸಿದ ನಂತರ ಶಂಕಿತನನ್ನು ಕೊಲ್ಲಲಾಗಿದ್ದು, ಗಾಯಗೊಂಡ ಅಧಿಕಾರಿಗಳ ಸ್ಥಿತಿ ಸ್ಥಿರವಾಗಿದೆ.
ಶಂಕಿತನ ವಿರುದ್ಧ ಕಿರುಕುಳ ಮತ್ತು ಕ್ರಿಮಿನಲ್ ಅತಿಕ್ರಮಣ ಆರೋಪದ ತನಿಖೆ ನಡೆಯುತ್ತಿರುವ ಮಧ್ಯೆಯೇ ಈ ಗುಂಡಿನ ದಾಳಿ ನಡೆದಿದೆ.
ಗುಂಡಿನ ದಾಳಿ ನಡೆದಾಗ ಅಧಿಕಾರಿಗಳು ಆತನನ್ನು ಬಂಧಿಸಲು ಹೊರಟಿದ್ದರು ಎಂದು ಕಾನೂನು ಜಾರಿ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ . “ನಿನ್ನೆ ಪ್ರಾರಂಭವಾದ ತನಿಖೆಯ ಅನುಸರಣೆಗಾಗಿ ಅವರು ಅಲ್ಲಿದ್ದರು” ಎಂದು ರಾಜ್ಯ ಪೊಲೀಸ್ ಆಯುಕ್ತ ಕರ್ನಲ್ ಕ್ರಿಸ್ಟೋಫರ್ ಪ್ಯಾರಿಸ್ ಹೇಳಿದ್ದಾರೆ ಎಂದು ರಾಯಿಟರ್ಸ್ ಉಲ್ಲೇಖಿಸಿದೆ. ಗವರ್ನರ್ ಜೋಶ್ ಶಪಿರೊ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ನಿಧನಕ್ಕೆ ಸಂತಾಪ ಸೂಚಿಸಿದರು.