HomeLatest NewsBREAKING: ಧರ್ಮಸ್ಥಳ ಪ್ರಕರಣ: ಬಂಗ್ಲಗುಡ್ಡದ ಮತ್ತೆರಡು ಸ್ಥಳಗಳಲ್ಲಿಯೂ ಮೂಳೆಗಳು ಪತ್ತೆ!

BREAKING: ಧರ್ಮಸ್ಥಳ ಪ್ರಕರಣ: ಬಂಗ್ಲಗುಡ್ಡದ ಮತ್ತೆರಡು ಸ್ಥಳಗಳಲ್ಲಿಯೂ ಮೂಳೆಗಳು ಪತ್ತೆ!

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೌಜನ್ಯಾ ಮಾವ ವಿಠಲಗೌಡ ಹೇಳಿದ್ದ ಬಂಗ್ಲಗುಡ್ಡ ಪ್ರದೇಶದಲ್ಲಿ ಎಸ್ ಐಟಿ ನಡೆಸಿದ ಶೋಧಕಾರ್ಯಾಚರಣೆ ವೇಳೆ ರಾಶಿ ರಾಶಿ ಮಾನವನ ಮೂಳೆಗಳು ಪತ್ತೆಯಾಗಿದ್ದು, ಇದೀಗ ಮತ್ತಷ್ಟು ಮೂಳೆಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ನೇತ್ರಾವತಿ ನದಿ ತೀರದ ಬಂಗ್ಲಗುಡ್ಡದ ದಟ್ಟ ಅರಣ್ಯದೊಳಗೆ ಎಸ್ ಐಟಿ ಅಧಿಕಾರಿಗಳು ಮಹಜರು ನಡೆಸಿದ್ದು, ಬೆಳಿಗ್ಗೆ ನಡೆಸಿದ ಶೋಧದ ವೇಳೆ ಒಂದು ಸ್ಥಳದಲ್ಲಿ ಮಾನವನ ಹಲವು ಮೂಳೆಗಳು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಎಸ್ ಐಟಿ ಅಧಿಕಾರಿಗಳು ಭೋಜನ ವಿರಾಮವನ್ನೂ ಪಡೆಯದೇ ನಿರಂತರ ಕಾರ್ಯಾಚರಣೆ ಮುಂದುವರೆಸಿದ್ದು, ಮೂರು ತಂಡಗಳಾಗಿ ಎಸ್ ಐತೀ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ಈ ವೇಳೆ ಬಂಗ್ಲಗುಡ್ಡದ ಮತ್ತೆ ಎರಡು ಸ್ಥಳಗಳಲ್ಲಿ ಕೆಲ ಮೂಳೆಗಳು ಪತ್ತೆಯಾಗಿವೆ. ಮಾನವನ ಮೂಳೆಗಳು ಪತ್ತೆಯಾಗಿದ್ದು, ಮೂಳೆ ಹಾಗೂ ಸ್ಥಳದಲ್ಲಿರುವ ಮಣ್ಣನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಬಂಗ್ಲಗುಡ್ಡದ ಮೂರು ಕಡೆಗಳಲ್ಲಿ ಇಂದು ಹಲವು ಮೂಳೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಎಸ್ ಐಟಿ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಸೋಕೋ ಟೀಂ ಸೇರಿದಂತೆ ಹಲವು ಅಧಿಕಾರಿಗಳು ಸಾಥ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular