ರಾಜ್ಯ ಸರ್ಕಾರದಿಂದ  ನೇರ ಸಾಲ ಯೋಜನೆ ಮತ್ತು ಚರ್ಮಕಾರರ ವಸತಿ ಯೋಜನೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕಚ್ಚಾ ಮಾಲು ಖರೀದಿ, ಚರ್ಮೋತ್ಪನ್ನಗಳ ಉತ್ಪಾದನೆ, ರಿಪೇರಿ ಮತ್ತು ಮಾರಾಟ ಮಾಡುವ ಅಂಗಡಿ ತೆರೆಯುವುದು/ಲಘು ವಾಹನದ ಮೂಲಕ ವ್ಯಾಪಾರ ಮಾಡುವವರಿಗೆ ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಗೆ ವಿವಿಧ ಯೋಜನೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.

ಚರ್ಮ ಕುಶಲಕರ್ಮಿಗಳು ಖಾಲಿ ನಿವೇಶನ ಹೊಂದಿದ್ದಲ್ಲಿ ಚರ್ಮಕಾರರಿಗೆ ವಾಸಕ್ಕೆ ಮತ್ತು ಉದ್ಯೋಗ ಮುಂದುವರೆಸಲು ಅನುಕೂಲ ವಾಗುವಂತೆ ವಸತಿ ಕಾರ್ಯಾಗಾರಗಳನ್ನು ನಿರ್ಮಿಸಿಕೊಳ್ಳಲು ನಿಗಮದ ಮೂಲಕ ರೂ.2.20 ಲಕ್ಷ ಧನಸಹಾಯ. (ಮೆ. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಯೋಜನೆಯ ಜಾರಿ)

ವಿಶೇಷ ಸೂಚನೆ: ಈ ಹಿಂದಿನ ಸಾಲಿನಲ್ಲಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

https://sevasindhu.karnataka.gov.in/https://sevasindhuservices.karnataka.gov.in ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಗಮದ ಎಲ್ಲಾ ಜಿಲ್ಲೆಯ ಜಿಲ್ಲಾ ಸಂಯೋಜಕರುಗಳ ಕಛೇರಿ ಅಥವಾ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ/ಎಸ್.ಟಿ ಸಹಾಯವಾಣಿ 9482300400 ಸಂಪರ್ಕಿಸುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-10-2025

ವಿಶೇಷ ಸೂಚನೆ: ನಿಗಮದ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read