ಬೆಂಗಳೂರು : ಮಲ್ಲಿಗೆ ಹೂ ಮುಡಿದ ನಟಿ ನವ್ಯಾ ನಾಯರ್ ಗೆ 1,1 ಲಕ್ಷ ರೂ.ದಂಡ ವಿಧಿಸಲಾಗಿದೆ. ಇದೇನಿದು..? ಹೂ ಮುಡಿದ್ರೆ ದಂಡನಾ..? ಇದೇನಿದು ಘಟನೆ ಅಂತ ಯೋಚಿಸ್ತಿದ್ದೀರಾ..? ಮುಂದೆ ಓದಿ.
ಕೇರಳದ ಕೊಚ್ಚಿಯಿಂದ ನಟಿ ನವ್ಯಾ ನಾಯರ್ ಓಣಂ ಹಬ್ಬಕ್ಕೆಂದು ಆಸ್ಟ್ರೇಲಿಯಾಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರು ತಂದೆ ಕೊಟ್ಟಂತಹ ಮಲ್ಲಿಗೆ ಹೂವನ್ನು ಅವರು ತೆಗೆದುಕೊಂಡು ಹೋಗಿದ್ದರು.
ಹೂವನ್ನು ಒಂದು ಬ್ಯಾಗ್ ನಲ್ಲಿ ಇಟ್ಟುಕೊಂಡು ಮೆಲ್ಬೋರ್ನ್ ನಲ್ಲಿ ನಟಿ ನವ್ಯಾ ನಾಯರ್ ಇಳಿದಿದ್ದಾರೆ. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ಬರೋಬ್ಬರಿ 1.14 ಲಕ್ಷ ರೂ ದಂಡ ವಿಧಿಸಿದ್ದಾರೆ.ವಿಕ್ಟೋರಿಯಾದಲ್ಲಿ ಮಲಯಾಳಿ ಅಸೋಸಿಯೇಷನ್ ಓಣಂ ಆಚರಣೆಯಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಆ ಕಾರ್ಯಕ್ರಮಕ್ಕಾಗಿ ನಾನು 1 ಲಕ್ಷ ರೂ ಮೌಲ್ಯದ ಹೂವು ಧರಿಸಿದ್ದೆ ಎಂದು ನವ್ಯಾ ತಮಾಷೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯಾದ ರೂಲ್ಸ್ ಪ್ರಕಾರ ಯಾವುದೇ ಸಸ್ಯದ ಭಾಗವನ್ನು ವಿದೇಶದಿಂದ ತರುವ ಮುನ್ನ ಮಾಹಿತಿ ನೀಡಬೇಕು. ಇದೊಂದು ಹೊಸ ಅನುಭವ ಎಂದು ನಟಿ ನವ್ಯಾ ನಾಯರ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.