HomeLatest NewsBIG NEWS: ಇಂದು ರಾತ್ರಿ ‘ರಕ್ತವರ್ಣ’ದಲ್ಲಿ ಚಂದ್ರ ದರ್ಶನ: ಬರಿಗಣ್ಣಿನಲ್ಲಿಯೇ ‘ಚಂದ್ರಗ್ರಹಣ’ ನೋಡಬಹುದು

BIG NEWS: ಇಂದು ರಾತ್ರಿ ‘ರಕ್ತವರ್ಣ’ದಲ್ಲಿ ಚಂದ್ರ ದರ್ಶನ: ಬರಿಗಣ್ಣಿನಲ್ಲಿಯೇ ‘ಚಂದ್ರಗ್ರಹಣ’ ನೋಡಬಹುದು

ಬೆಂಗಳೂರು: ಇಂದು ರಾತ್ರಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ರಾತ್ರಿ 9:57 ಕ್ಕೆ ಆರಂಭವಾಗಿ ತಡರಾತ್ರಿ 1.26ಕ್ಕೆ ಅಂತ್ಯವಾಗಲಿದ್ದು, ರಕ್ತ ವರ್ಣದಲ್ಲಿ ಚಂದ್ರನ ದರ್ಶನವಾಗಲಿದೆ.

ಖಗೋಳದ ಅಪೂರ್ವ ವಿದ್ಯಾಮಾನ ಖಗ್ರಾಸ ಚಂದ್ರಗ್ರಹಣ ಸೆಪ್ಟೆಂಬರ್ 7ರಂದು ರಾತ್ರಿ ಜರುಗಲಿದ್ದು, ಚಂದ್ರ ರಕ್ತವರ್ಣ ಅಥವಾ ತಾಮ್ರವರ್ಣದಲ್ಲಿ ಗೋಚರಿಸಲಿದ್ದಾನೆ. 5 ಗಂಟೆ 27 ನಿಮಿಷಗಳ ಕಾಲ ಗ್ರಹಣ ಇರಲಿದೆ. ಒಂದು ಗಂಟೆ 22 ನಿಮಿಷಗಳ ಕಾಲ ಸಂಪೂರ್ಣ ಗ್ರಹಣ ಇರಲಿದ್ದು, ಬರಿ ಗಣ್ಣಿನಲ್ಲಿಯೇ ವೀಕ್ಷಿಸಬಹುದಾಗಿದೆ ಎಂದು ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ. ಬಿ.ಆರ್. ಗುರುಪ್ರಸಾದ್ ತಿಳಿಸಿದ್ದಾರೆ.

ಸೆಪ್ಟೆಂಬರ್ 7ರಂದು ರಾತ್ರಿ 8:58ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. 9:57 ರಿಂದ ಭಾಗಶಃ ಚಂದ್ರಗ್ರಹಣ ಶುರುವಾಗಲಿದ್ದು, ರಾತ್ರಿ 11 ರಿಂದ ಸಂಪೂರ್ಣ ಗ್ರಹಣ ಆರಂಭವಾಗುತ್ತದೆ. ಈ ಅವಧಿಯಲ್ಲಿ ಕೆಂಪು ಚಂದಿರನನ್ನು ವೀಕ್ಷಿಸಬಹುದಾಗಿದೆ. ತಡರಾತ್ರಿ 1.26ಕ್ಕೆ ಗ್ರಹಣ ಮುಕ್ತಾಯವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೂರ್ಯ, ಭೂಮಿ ಮತ್ತು ಚಂದ್ರ ಸರಳರೇಖೆಯಲ್ಲಿ ಬಂದಾಗ ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಭೂಮಿ ತಡೆಯುತ್ತದೆ. ಆಗ ಚಂದ್ರ ರಕ್ತವರ್ಣದ ಚಂದ್ರ ಗೋಚರಿಸುತ್ತದೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ದೇವಾಲಯಗಳನ್ನು ಮಧ್ಯಾಹ್ನದಿಂದಲೇ ಬಂದ್ ಮಾಡಲಾಗುವುದು. ಚಂದ್ರಗ್ರಹಣ ಮುಕ್ತಾಯದ ಬಳಿಕ ಶುದ್ಧೀಕರಣ, ಅಭಿಷೇಕ ಬಳಿಕ ಪೂಜೆ ನೆರವೇರಿಸಲಾಗುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular