ದೇಶದ ಗಮನ ಸೆಳೆದ ‘ಕರ್ನಾಟಕ ಮಾಡೆಲ್’ ; ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಕರ್ನಾಟಕವೇ ನಂ1.

ಬೆಂಗಳೂರು : ಮತ್ತೊಮ್ಮೆ “ಕರ್ನಾಟಕ ಮಾಡೆಲ್“ ದೇಶದ ಗಮನ ಸೆಳೆದಿದೆ.ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಈಗ ಕರ್ನಾಟಕವೇ ನಂ1 ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ಕರ್ನಾಟಕವು ಈಗ ದೇಶವಷ್ಟೇ ಅಲ್ಲ, ಜಾಗತಿಕವಾಗಿಯೂ ಕುತೂಹಲದ ಮತ್ತು ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದೆ, ಇದು ನಮ್ಮ ಸರ್ಕಾರದ ಸಾಧನೆ ಮತ್ತು ಅಭಿವೃದ್ಧಿಪರ ನೀತಿಗಳಿಗೆ ದೊರಕಿದ ಯಶಸ್ಸು.
ನಮ್ಮ ಸರ್ಕಾರದ ಇಚ್ಚಾಶಕ್ತಿಯಲ್ಲಿ ಕರ್ನಾಟಕವು ಮೂಲಸೌಕರ್ಯ, ಆರ್ಥಿಕ, ಸಾಮಾಜಿಕ, ಪರಿಸ್ಥಿತಿಗಳಲ್ಲಿ ಗಣನೀಯ ಸುಧಾರಣೆಗಳನ್ನು ಕಾಣುತ್ತಿದೆ ಎಂಬುದಕ್ಕೆ ಹೂಡಿಕೆದಾರರಲ್ಲಿ ಮೂಡಿರುವ ಈ ಭರವಸೆಯೇ ಸಾಕ್ಷಿ.
ಹೂಡಿಕೆದಾರರಲ್ಲಿ ರಾಜ್ಯದ ಬಗೆಗೆ ಇರುವ ವಿಶ್ವಾಸ ಮತ್ತು ಭರವಸೆಯು ಕರ್ನಾಟಕದ ಭವಿಷ್ಯದ ಅಭಿವೃದ್ಧಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read