HomeLatest NewsBIG NEWS: ವಿಐಎಸ್ಎಲ್ ಕಾರ್ಖಾನೆಗೆ ಪುನರುಜ್ಜೀವನ ಬಗ್ಗೆ HDK ಮಹತ್ವದ ಸಭೆ

BIG NEWS: ವಿಐಎಸ್ಎಲ್ ಕಾರ್ಖಾನೆಗೆ ಪುನರುಜ್ಜೀವನ ಬಗ್ಗೆ HDK ಮಹತ್ವದ ಸಭೆ

ನವದೆಹಲಿ: ಭದ್ರಾವತಿಯ ಸೆಲೆಬ್ರೇಶ್ವರಯ್ಯ ಕಬ್ಬಿಣ ಮತ್ತು ಉಪ್ಪು ಕಾರ್ಖಾನೆ(ವಿಐಎಸ್ಎಲ್) ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಕೇಂದ್ರ ಉಕ್ಕು ಸಚಿವಾಲಯ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿದೆ.

ಕೇಂದ್ರ ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಕಾಲಮಿತಿಯೊಳಗೆ ವಿಐಎಸ್ಎಲ್ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ದೆಹಲಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ(VISL) ಮತ್ತು ಸೇಲಂ ಉಕ್ಕು ಸ್ಥಾವರದ ಪುನರುಜ್ಜೀವನದ ಕುರಿತು ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಹೆಚ್ಡಿ.ಡಿ. ಕುಮಾರಸ್ವಾಮಿ VISL ಹಂತ ಹಂತದ ಆಧುನೀಕರಣ, ಉತ್ಪನ್ನ ವಿಸ್ತರಣೆ ಮತ್ತು ಪ್ರಯೋಗಗಳ ಮೂಲಕ ಪುನರುಜ್ಜೀವನ ತಂತ್ರ ಈಗಾಗಲೇ ಪ್ರಾರಂಭಿಸಲಾಗಿದೆ. ಸೇಲಂ ಉಕ್ಕು ಸ್ಥಾವರದ ಖರೀದಿ ಮತ್ತು ಉತ್ಪಾದನಾ ಯೋಜನೆಗಳು ಜಾಗತಿಕ ಪಾಲುದಾರಿಕೆ ಚರ್ಚೆಯಲ್ಲಿ ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಐಎಸ್ಎಲ್ ಕಾರ್ಖಾನೆ ಪುನರುಜ್ಜೀವನಕ್ಕೆ 15,000 ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಸಂಡೂರಿನ ರಾಮಘಡ ಅರಣ್ಯ ವಲಯದಲ್ಲಿ ವಿಐಎಸ್ಎಲ್ ಗೆ ಗಣಿ ಪಡೆಯಲು ಪ್ರಯತ್ನ ನಡೆದಿದ್ದು. ಆ ಗಣಿ ಸಿಗದಿದ್ದರೆ ಛತ್ತಿಸ್ಗಢ ಇಲ್ಲವೇ ಜಾರ್ಖಂಡ್ ನಿಂದ ಎನ್.ಎಂ.ಡಿ.ಸಿ.ಯ ಅದಿರು ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

ವಿಐಎಸ್ಎಲ್ ಅಭಿವೃದ್ಧಿ ಬಗ್ಗೆ ವಿಸ್ತೃತ ಯೋಜನಾ ವರದಿಯನ್ನು ನೀತಿ ಆಯೋಗ ಪರೀಶೀಲನೆ ನಡೆಸಲಿದ್ದು, ನಂತರ ಪ್ರಧಾನಿ ಸಚಿವಾಲಯದಿಂದ ಪರಿಶೀಲನೆ ನಡೆಸಲಾಗುವುದು. ಬಳಿಕ ವಿಐಎಸ್ಎಲ್ ಕಾರ್ಖಾನೆ ಪುನರುಜ್ಜೀವನ ಪ್ಯಾಕೇಜ್ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವ ಸಾಧ್ಯತೆ ಇದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular