ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನದ ಡೈಮರ್ ಜಿಲ್ಲೆಯ ಚಿಲಾಸ್ನ ಥೋರ್ ಪ್ರದೇಶದ ಬಳಿ ಸೋಮವಾರ ಪಾಕಿಸ್ತಾನ ಸರ್ಕಾರಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲಾ ಐವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಎಎಫ್ಪಿ ವರದಿ ಪ್ರಕಾರ, ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ ಹಮೀದ್, ಪರ್ವತಮಯ ಪ್ರವಾಸಿ ಪ್ರದೇಶದಲ್ಲಿ ಹೊಸದಾಗಿ ಪ್ರಸ್ತಾಪಿಸಲಾದ ಹೆಲಿಪ್ಯಾಡ್ನಲ್ಲಿ ಹೆಲಿಕಾಪ್ಟರ್ ಪರೀಕ್ಷಾರ್ಥ ಲ್ಯಾಂಡಿಂಗ್ ನಡೆಸುತ್ತಿದ್ದಾಗ ಪತನಗೊಂಡಿತು. ಬಲಿಯಾದವರಲ್ಲಿ ಇಬ್ಬರು ಪೈಲಟ್ಗಳು ಮತ್ತು ಮೂವರು ತಂತ್ರಜ್ಞರು ಸೇರಿದ್ದಾರೆ ಎಂದು ಹೇಳಿದರು.
ಡೈಮರ್ ಜಿಲ್ಲೆಯ ಚಿಲಾಸ್ ಪ್ರದೇಶದಲ್ಲಿ Mi-17 ವಿಮಾನ ಪತನಗೊಂಡಿದೆ ಎಂದು ಗಿಲ್ಗಿಟ್-ಬಾಲ್ಟಿಸ್ತಾನ್ ಸರ್ಕಾರದ ವಕ್ತಾರ ಫೈಜುಲ್ಲಾ ಫರಾಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
You Might Also Like
TAGGED:ಹೆಲಿಕಾಪ್ಟರ್