ದೇಶದಲ್ಲೇ ಮೊದಲ ಬಾರಿಗೆ ಜಲಮೂಲ ಸಮಗ್ರ ನಿರ್ವಹಣೆಗೆ ‘ಡಿಜಿಟಲ್ ವಾಟರ್ ಸ್ಟಾಕ್ ಯೋಜನೆ’ ಜಾರಿ

ಬೆಂಗಳೂರು: ರಾಜ್ಯದ ಜಲ ಮೂಲಗಳ ಸಮಗ್ರ ನಿರ್ವಹಣೆ ಮತ್ತು ಪಾರದರ್ಶಕತೆ ಹೊಣೆಗಾರಿಕೆ ತರಲು ಉಪಗ್ರಹ ದತ್ತಾಂಶ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಡಿಜಿಟಲ್ ವಾಟರ್ ಸ್ಟಾಕ್ ಯೋಜನೆಯ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.

ರಾಜ್ಯದಲ್ಲಿನ ಜಲಮೂಲಗಳು ಹಾಗೂ ನೀರಿನ ಸಮಗ್ರ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಉಪಗ್ರಹಗಳ ಸೆನ್ಸಾರ್ ಗಳಿಂದ ಪಡೆದ ದತ್ತಾಂಶ, ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ನಿಂದ ಪಡೆಯುವ ಇಮೇಜಿಂಗ್ ನ ವಿಶ್ಲೇಷಣೆ ಮಾಡುವುದಕ್ಕೆ ಡಿಜಿಟಲ್ ವಾಟರ್ ಸ್ಟಾಕ್ ಎನ್ನಲಾಗುತ್ತದೆ.

ಜಲಮೂಲಗಳ ಐದು ವರ್ಷಗಳ ಹಿಂದಿನ ದತ್ತಾಂಶ ಪಡೆದು ಪ್ರಸ್ತುತ ಇರುವ ಸ್ಥಿತಿಗೆ ಹೋಲಿಕೆ ಮಾಡಲಾಗುತ್ತದೆ. ಜಲಮೂಲದ ಸ್ವರೂಪ ನೀರಿನ ಶೇಖರಣೆಯಲ್ಲಿನ ವ್ಯತ್ಯಾಸ ಗುರುತಿಸಿ ಸರಿಪಡಿಸಲಾಗುವುದು. ರಾಜ್ಯದ ಕೆರೆಗಳು ಇತರೆ ಜಲಮೂಲಗಳನ್ನು ಡಿಜಿಟಲ್ ವಾಟರ್ ಸ್ಟಾಕ್ ಚಟುವಟಿಕೆಯಡಿ ಸಮರ್ಪಕ ಸರ್ವೇ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಇದು ಖಚಿತಪಡಿಸಲಿದ್ದು. ಮೊದಲ ಹಂತದಲ್ಲಿ 41 ತಾಲೂಕುಗಳಲ್ಲಿ ಜಾರಿ ಮಾಡಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read