ಸಂಭಾಲ್ ನಲ್ಲಿ ಹಿಂದೂಗಳ ಸಂಖ್ಯೆ ಶೇ. 30ರಷ್ಟು ಕುಸಿತ, ಮುಸ್ಲಿಂ ಪ್ರಮಾಣ ಶೇ. 85ಕ್ಕೆ ಏರಿಕೆ…!

ಲಖ್ನೋ: ಉತ್ತರ ಪ್ರದೇಶದ ಸಂಭಾಲ್ ಪುರಸಭೆ ಪ್ರದೇಶ ವ್ಯಾಪ್ತಿಯಲ್ಲಿ ಹಿಂದೂಗಳ ಜನಸಂಖ್ಯೆ ಕಳೆದ 75 ವರ್ಷಗಳಲ್ಲಿ ಶೇಕಡ 30ರಷ್ಟು ಕುಸಿತ ಕಂಡಿದೆ. ಇದೇ ವೇಳೆ ಮುಸ್ಲಿಂ ಜನಸಂಖ್ಯೆಯ ಪ್ರಮಾಣ ಶೇಕಡ 50 ರಿಂದ ಶೇಕಡ 85ಕ್ಕೆ ಏರಿಕೆಯಾಗಿದೆ ಎಂಬ ಸಂಗತಿ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಅರೋರಾ ನೇತೃತ್ವದ ನ್ಯಾಯಾಂಗ ತನಿಖಾ ವರದಿಯಲ್ಲಿ ಬಹಿರಂಗವಾಗಿದೆ.

ಶಾಹಿ ಜಮಾ ಮಸೀದಿ ಸಮೀಕ್ಷೆ ಸಂಬಂಧ 2024ರಲ್ಲಿ ಹಿಂಸಾಚಾರ ಕುರಿತು ಆಯೋಗವು ತನಿಖೆ ನಡೆಸಿತ್ತು. 1947 ರಲ್ಲಿ ಶೇಕಡ 45 ರಿಂದ 50ರಷ್ಟಿದ್ದ ಹಿಂದೂಗಳ ಜನಸಂಖ್ಯೆ ಪ್ರಮಾಣ ಮತಾಂತರ, ಕೋಮುಗಲಭೆ, ರಾಜಕೀಯ ತುಷ್ಟೀಕರಣ, ವಲಸೆ ಸೇರಿ ಇತರ ಕಾರಣದಿಂದ ಕುಸಿತ ಕಂಡಿದೆ.

ಸಂಭಾಲ್ ಹಿಂಸಾಚಾರ ಜೊತೆಗೆ ಪ್ರದೇಶದ ಜನಸಂಖ್ಯಾ ಶಾಸ್ತ್ರದ ಬದಲಾವಣೆ ಇತಿಹಾಸ, ಗಲಭೆಯ ಹಿಂದಿನ ಕೋಮು ರಾಜಕಾರಣದ ಪಾತ್ರ ಕುರಿತಾಗಿ ಆಯೋಗ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ 450 ಪುಟಗಳ ವರದಿ ಸಲ್ಲಿಸಿದೆ. ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಅರೋರಾ, ಐಪಿಎಸ್ ಅಧಿಕಾರಿ ಅರವಿಂದ್ ಕುಮಾರ್ ಜೈನ್, ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಮೋಹನ್ ಪ್ರಸಾದ್ ಅವರನ್ನು ಒಳಗೊಂಡ ಸಮಿತಿಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವರದಿ ಸಲ್ಲಿಸಿದೆ.

1947 ರಲ್ಲಿ ಶೇಕಡ 45 ರಿಂದ 50 ರಷ್ಟು ಇದ್ದ ಹಿಂದೂಗಳ ಜನಸಂಖ್ಯೆ ಪ್ರಮಾಣ ವಿವಿಧ ಕಾರಣಗಳಿಂದ 2024ರ ವೇಳೆಗೆ ಶೇಕಡ 15 ರಿಂದ 18ಕ್ಕೆ ಕುಸಿದಿದೆ. ಹಿಂದೂ ದೇವಾಲಯಗಳು ಸೇರಿದಂತೆ ಹಿಂದೂ ನಂಬಿಕೆಯ ಪವಿತ್ರ ಕ್ಷೇತ್ರಗಳಲ್ಲಿ ಬಹುತೇಕ ಒತ್ತುವರಿಯಾಗಿವೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read