ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ನಗರದಲ್ಲಿ ನಾಲ್ಕು ಅಂತಸ್ತಿನ ಅನಧಿಕೃತ ಪರಾಟ್ ಮೆಂಟ್ ಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ವಿರಾರ್ ಪ್ರದಎಶದ ವಿಜಯ್ ನಗರದಲ್ಲಿರುವ 50 ಫ್ಲಾಟ್ ಗಳನ್ನು ಹೊಂದಿರುವ ರಮಾಬಾಯಿ ಅಪಾರ್ಟ್ ಮೆಂಟ್ ಬುಧವಾರ ಮಧ್ಯಾಹ್ನ ಕುಸಿದು ಬಿದ್ದಿತ್ತು. ಹಲವರು ಅವಶೇಷಗಳ ಅಡಿ ಸಿಲುಕಿದ್ದರು. ಘಟನ ಅಸ್ಥಳದಲ್ಲಿ ಅವಶೇಷಗಳನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
ದುರಂತದಲ್ಲಿ ವರೆಗೆ 15 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗಿಒಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪಾಲ್ಘರ್ ಜಿಲ್ಲಾಧಿಕಾರಿ ಡಾ.ಇಂದೂ ರಾಣಿ ಮಾಹಿತಿ ನೀಡಿದ್ದಾರೆ.