HomeLatest News'ಚಾಮುಂಡಿ ತಾಯಿ'ಯನ್ನು ಕೆಣಕಲು ಹೋದರೆ ರಾಜಕೀಯವಾಗಿ ಭಸ್ಮವಾಗುತ್ತೀರಿ : DCM ಡಿಕೆಶಿಗೆ ಬಿ.ವೈ ವಿಜಯೇಂದ್ರ ಎಚ್ಚರಿಕೆ

‘ಚಾಮುಂಡಿ ತಾಯಿ’ಯನ್ನು ಕೆಣಕಲು ಹೋದರೆ ರಾಜಕೀಯವಾಗಿ ಭಸ್ಮವಾಗುತ್ತೀರಿ : DCM ಡಿಕೆಶಿಗೆ ಬಿ.ವೈ ವಿಜಯೇಂದ್ರ ಎಚ್ಚರಿಕೆ

ಬೆಂಗಳೂರು : ಚಾಮುಂಡಿ ತಾಯಿಯನ್ನು ಕೆಣಕಲು ಹೋದರೆ ರಾಜಕೀಯವಾಗಿ ಭಸ್ಮವಾಗಿ ಹೋಗುವಿರಿ ಎಚ್ಚರ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬಿ.ವೈ ವಿಜಯೇಂದ್ರ ವಾಗ್ಧಾಳಿ ನಡೆಸಿದ್ದಾರೆ.

ಉಪಮುಖ್ಯಮಂತ್ರಿ @DKShivakumarಅವರೇ, ನಿಮ್ಮ ಪಕ್ಷದಲ್ಲಿ ನಿಮಗೆ ಎದುರಾಗಿರುವ ಕಂಟಕದಿಂದ ಪಾರಾಗಲು ಚಾಮುಂಡಿ ಬೆಟ್ಟ ಹಾಗೂ ಸಂಪ್ರದಾಯದ ದಸರೆಯನ್ನು ಬಳಸಿಕೊಳ್ಳಬೇಡಿ, ಬಂಡೆಯೆಂದು ಬೀಗುತ್ತಿದ್ದ ನೀವು ಈಗಾಗಲೇ ಮುದ್ದೆಯಾಗಿ ಹೋಗಿದ್ದೀರಿ, ಚಾಮುಂಡಿ ತಾಯಿಯನ್ನು ಕೆಣಕಲು ಹೋದರೆ ರಾಜಕೀಯವಾಗಿ ಭಸ್ಮವಾಗಿ ಹೋಗುವಿರಿ ಎಚ್ಚರ. ಪೈಪೋಟಿಯ ಮೇಲೆ ನೀವೂ, ನಿಮ್ಮ ಕಾಂಗ್ರೆಸಿಗರು ಹಿಂದೂ ಧರ್ಮದ ಅವಹೇಳನ, ಹಿಂದೂ ಧಾರ್ಮಿಕ ಕೇಂದ್ರಗಳ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದೀರಿ, ಇದೀಗ ಹಿಂದೂ ಪರಂಪರೆಯ ವಿಜಯ ದಶಮಿ ಹಬ್ಬವನ್ನು ಮಲಿನ ಮಾಡಲು ಹೊರಟಿದ್ದೀರಿ, ಮಹಿಷಾಸುರ ಮರ್ದಿನಿ ನಿಮ್ಮನ್ನು ಮರ್ದನ ಮಾಡುವ ಕಾಲ ದೂರವಿಲ್ಲ, “ಚಾಮುಂಡಿ ತಾಯಿ ಶ್ರದ್ಧೆಯ ಭಕ್ತರ ಸ್ವತ್ತು, ಅದನ್ನು ಮುಟ್ಟಲು ಹೋದರೆ ಕಾದಿದೆ ನಿಮಗೆ ಆಪತ್ತು”. ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬಿ.ವೈ ವಿಜಯೇಂದ್ರ ವಾಗ್ಧಾಳಿ ನಡೆಸಿದ್ದಾರೆ.

ನಮಸ್ತೇ ಸದಾ ವತ್ಸಲೇ ಮಾತೃಭೂಮಿ… “ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನಾ ಗೀತೆ ಮಾತೃಭೂಮಿಗೆ ಧನ್ಯತೆ ಸಮರ್ಪಿಸುವ ಸಂಕೇತವನ್ನು ರವಾನಿಸುತ್ತದೆ, ರಾಷ್ಟ್ರಭಕ್ತಿ ಪ್ರೇರೇಪಿಸುತ್ತದೆ, ಇದು ಸಂಘಟನೆಯ ಗೀತೆಯಷ್ಟೇ ಅಲ್ಲ ದೇಶಭಕ್ತಿಯ ಬದ್ಧತೆಯನ್ನು ಜಗತ್ತಿಗೇ ಸಾರಿ ಹೇಳುವ ಗೀತೆ. ನಮ್ಮನ್ನು ಹೆರುವ ತಾಯಿಗೆ ಮಡಿಲ ಆಸರೆ ನೀಡುವವಳು ಭೂಮಿತಾಯಿ. ಈ ಹಿನ್ನಲೆಯಲ್ಲಿಯೇ ‘ಮಾತೃ ಭೂಮಿ’ ಎಂದು ಜನ್ಮದಾತೆಯಷ್ಟೇ ಜನ್ಮಭೂಮಿಯನ್ನು ಆರಾಧಿಸುತ್ತೇವೆ, ತಾಯ್ನೆಲಕ್ಕಾಗಿ ನಮ್ಮನ್ನೇ ಸಮರ್ಪಿಸಿಕೊಳ್ಳುವಷ್ಟು ಭಾವುಕರಾಗುತ್ತೇವೆ. ಜನನಿ, ಜನ್ಮ ಭೂಮಿ ಮಹತ್ವ ತಿಳಿಸಿಕೊಟ್ಟು ರಾಷ್ಟ್ರ ಭಕ್ತಿ ಪಡಿಮೂಡಿಸುವ@RSSorg ಬಗ್ಗೆ ಕಾಂಗ್ರೆಸ್ಸಿಗರಿಗೆ ಮೊದಲಿನಿಂದಲೂ ಅಸಹನೆ ಏಕೆಂದರೆ ಗುಲಾಮಿ ಚೌಕಟ್ಟಿನಲ್ಲಿ ನೆಹರು ಕುಟುಂಬವನ್ನು ಓಲೈಸುವ ಭಟ್ಟಂಗಿತನ ಬಿಟ್ಟರೆ ಆವರಿಗೆ ಬೇರೇನೂ ತಿಳಿದಿಲ್ಲ. ಸರ್ವಾಧಿಕಾರಿತನ,ಭ್ರಷ್ಟತೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ವಿದ್ರೋಹಿ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪಠ್ಯಕ್ರಮವನ್ನು ಮಾತ್ರ ಕಾಂಗ್ರೆಸ್ ಪಾಠ ಶಾಲೆಯಲ್ಲಿ ಬೋಧಿಸಲಾಗುತ್ತದೆ. ಉಪಮುಖ್ಯಮಂತ್ರಿ ಮಾನ್ಯ@DKShivakumar ಅವರ ಪ್ರಕರಣ ದೇಶದ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಲಿದೆ, ವಿಧಾನಸಭೆಯಲ್ಲಿ ಡಿಕೆಶಿ ಅವರು ಸಂಘದ ಗೀತೆ ತಮಗೂ ತಿಳಿದಿದೆ ಎಂಬ ಪಾಂಡಿತ್ಯ ಪ್ರದರ್ಶಿಸಲು ಹೋಗಿ ‘ಸದಾ ವತ್ಸಲೇ ಮಾತೃಭೂಮಿ…’ಪಠಿಸಿದರು, ಇದನ್ನೇ ಮಹದಪರಾಧವೆಂದು ಪರಿಗಣಿಸಿದ ಕಾಂಗ್ರೆಸ್ ಮುಂದಾಳುಗಳು ಡಿಕೆ ಶಿವಕುಮಾರ್ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ‘ರಾ ಕಮಾಂಡ್ ‘ಮುಂದೆ ಕಟಕಟ್ಟೆಯಲ್ಲಿ ನಿಲ್ಲಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ,ಡಿಕೆಶಿ ಅವರು ಬಾಗಿ ಕ್ಷಮಾಪಣೆ ಕೇಳುವವಂತೆ ಮಾಡಿದ್ದಾರೆ. ಬಂಡೆಯಂಥ ಡಿಕೆಶಿ ಅವರಿಗೇ ಈ ಗತಿಯಾದರೆ, ಕಾಂಗ್ರೆಸ್ ಪಕ್ಷದಲ್ಲಿರುವ ಅದೆಷ್ಟೋ ದೇಶ ನಿಷ್ಠ ಕಾರ್ಯಕರ್ತರ ಸ್ಥಿತಿ ಹೇಗಿರಬಹುದು? ಎಂಬುದು ಊಹೆಗೂ ನಿಲುಕದ ಪ್ರಶ್ನೆಯಾಗಿದೆ. ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದ ಕಾಂಗ್ರೆಸ್ ನ ಆಂತರಿಕ ವಲಯದಲ್ಲಿ ಇವತ್ತಿಗೂ ತುರ್ತುಪರಿಸ್ಥಿತಿಕರಾಳ ನೃತ್ಯ ಮಾಡುತ್ತಲೇ ಇದೆ ಎಂಬುದಕ್ಕೆ ಡಿಕೆಶಿ ಅವರ ಕ್ಷಮಾಪಣೆ ಕೇಳಿದ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ. ‘ಮಾತೃಪ್ರೇಮ-ದೇಶ ಭಕ್ತಿ’ಸ್ವಾಭಿಮಾನಿ ಪ್ರಜೆಯ ಹೆಮ್ಮೆಯ ಕಿರೀಟ, ತಾಯ್ನೆಲ್ಲದ ಬದ್ಧತೆಯನ್ನು ತೋರುವುದೇ ಅಪರಾಧವೆಂದು ಪರಿಗಣಿಸಿ ಕ್ಷಮಾಪಣೆ ಕೇಳುವ ಪರಿಸ್ಥಿತಿ ವ್ಯಕ್ತಿ ಒಬ್ಬನನ್ನು ಮುತ್ತುವುದಾದರೆ ಅದಕ್ಕಿಂತ ಘೋರ ದುರಂತ ಇನ್ನೊಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

@DKShivakumarಅವರ ‘ಕ್ಷಮೆ’ ರಾಹುಲ್ ಗಾಂಧಿಯವರನ್ನು ತಣ್ಣಗಾಗಿಸಲು,ಅಧಿಕಾರ ರಾಜಕಾರಣವನ್ನು ಭದ್ರಪಡಿಸಿಕೊಳ್ಳಲು ಅನಿವಾರ್ಯವಾಗುವುದಾದರೆ ಅದು ಕರ್ನಾಟಕದ ಸ್ವಾಭಿಮಾನವನ್ನು ಒತ್ತೆಯಿಟ್ಟಂತೆ. ಈಗಲೂ ಕಾಲ ಮಿಂಚಿಲ್ಲ ಡಿಕೆ ಶಿವಕುಮಾರ್ ಅವರು ನಮಸ್ತೆ ಸದಾ ವತ್ಸಲೇ ಮಾತೃಭೂಮಿ…. ಗೀತೆಯ ಅರ್ಥವನ್ನು ರಾಹುಲ್ ಗಾಂಧಿ ಅವರಿಗೆ ತಿಳಿಸಿಕೊಟ್ಟು ತಮ್ಮ ನಡೆಯನ್ನು ಸಮರ್ಥಿಸಿ ಕೊಳ್ಳಲಿ, “ಮಾತೃ ಭೂಮಿಗಿಂತ ಕಾಂಗ್ರೆಸ್ ದೊಡ್ಡದಲ್ಲ” ಎಂಬ ಸಂದೇಶ ದೇಶಕ್ಕೆ ರವಾನಿಸಲಿ, ಆ ಮೂಲಕ ಸ್ವಾಭಿಮಾನಿ ಕನ್ನಡ ನೆಲದ ಘನತೆಯನ್ನು ಎತ್ತಿ ಹಿಡಿಯಲಿ ಎಂದಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular