ಬೈಂದೂರು: ಬೈಕ್ ನಲ್ಲಿ ತೆರಳುವಾಗ ಮೈಮೇಲೆ ತೆಂಗಿನ ಮರ ಬಿದ್ದು ಸವಾರ ಸಾವನ್ನಪ್ಪಿದ ಘಟನೆ ಶಿರೂರು ಗ್ರಾಮದ ಕಳಿಹಿತ್ಲು ಸಮುದ್ರದ ಬಳಿ ನಡೆದಿದೆ.
ಶಿರೂರು ಗ್ರಾಮದ ರಾಮ(52) ಮೃತಪಟ್ಟವರು ಎಂದು ಹೇಳಲಾಗಿದೆ. ಆ. 15ರಂದು ಮಧ್ಯಾಹ್ನ ಸ್ನೇಹಿತ ಚಂದ್ರು ಜೊತೆಗೆ ಮೀನು ಹಿಡಿಯಲು ಬೈಕ್ ನಲ್ಲಿ ತೆರಳಿದ್ದ ವೇಳೆ ಘಟನೆ ನಡೆದಿದೆ. ಭಾರಿ ಗಾಳಿ ಮಳೆಯಿಂದಾಗಿ ರಸ್ತೆ ಬದಿಯ್ಲಲಿದ್ದ ತೆಂಗಿನ ಮರ ಮುರಿದುಬಿದ್ದಿದೆ. ಇದರಿಂದ ರಾಮ ಮತ್ತು ಚಂದ್ರು ಇಬ್ಬರೂ ಗಾಯಗೊಂಡಿದ್ದು, ಬೈಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ರಾಮ ಅವರನ್ನು ಮುಕ್ಕದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 24ರಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.