HomeLatest NewsBIG NEWS: ಈ ಶೈಕ್ಷಣಿಕ ವರ್ಷದಿಂದಲೇ ಆರೋಗ್ಯ ಸಂಬಂಧಿ ದೂರ ಶಿಕ್ಷಣ ಕೋರ್ಸ್ ಸ್ಥಗಿತ: ಯುಜಿಸಿ...

BIG NEWS: ಈ ಶೈಕ್ಷಣಿಕ ವರ್ಷದಿಂದಲೇ ಆರೋಗ್ಯ ಸಂಬಂಧಿ ದೂರ ಶಿಕ್ಷಣ ಕೋರ್ಸ್ ಸ್ಥಗಿತ: ಯುಜಿಸಿ ಆದೇಶ

ನವದೆಹಲಿ: ಮನಃಶಾಸ್ತ್ರ ಮತ್ತು ಆರೋಗ್ಯ ಸಂಬಂಧಿತ ಕೋರ್ಸ್ ಗಳನ್ನು ಇನ್ನು ಮುಂದೆ ದೂರ ಶಿಕ್ಷಣ ಅಥವಾ ಆನ್ಲೈನ್ ವಿಧಾನದ ಮೂಲಕ ಕಲಿಸುವುದನ್ನು ಸ್ಥಗಿತಗೊಳಿಸಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಆದೇಶ ಹೊರಡಿಸಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಅಂಡ್ ಹೆಲ್ತ್ ಕೇರ್ ಪ್ರೊಫೆಷನ್ಸ್ ಕಾಯ್ದೆ 2021ರ ಅನುಸಾರ ಆರೋಗ್ಯ ಸಂಬಂಧಿತ ಕೋರ್ಸ್ ಗಳನ್ನು ಆನ್ಲೈನ್ ಅಥವಾ ದೂರ ಶಿಕ್ಷಣದ ಮೂಲಕ ಕಲಿಸುವಂತಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳು ಈ ಕೋರ್ಸ್ ಗಳ ಕಲಿಕೆಗೆ ಪ್ರವೇಶ ನೀಡಿದ್ದರೆ ಅದನ್ನು ಹಿಂಪಡೆಯಲಾಗುವುದು ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ತಿಳಿಸಿದ್ದಾರೆ.

ವೃತ್ತಿಪರ ಮತ್ತು ಅಭ್ಯಾಸ ಆಧಾರಿತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಮನೋವಿಜ್ಞಾನ, ಸೂಕ್ಷ್ಮ ಜೀವ ವಿಜ್ಞಾನ, ಜೈವಿಕ ತಂತ್ರಜ್ಞಾನ, ಕ್ಲಿನಿಕಲ್ ಪೌಷ್ಟಿಕಾಂಶ, ಆಹಾರ ಪದ್ಧತಿ ಮತ್ತು ಆಹಾರ ವಿಜ್ಞಾನ ಕಾರ್ಯಕ್ರಮಗಳು ಈ ನಿಷೇಧದ ಅಡಿಯಲ್ಲಿ ಬರುತ್ತವೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular