ಉಡುಪಿ: ಸಾಹಿತಿ ಬಾನು ಮುಷ್ತಾಕ್ ಅವರಿಗೆ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ನಿಟ್ಟೆ ಸುದೀಪ್ ಶೆಟ್ಟಿ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ಧರ್ಮಗಳ ಮಧ್ಯೆ ವೈಷಮ್ಯ ಮೂಡಿಸುವಂತೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಸರಾ ಹಿಂದೂಗಳ ಸಾಂಸ್ಕೃತಿಕ ಹಬ್ಬ. ಸನಾತನ ಹಿಂದೂ ಸಂಸ್ಕೃತಿ ಒಪ್ಪದ ಮತ್ತು ಆಚರಣೆ ಮಾಡದರಿಂದ ದಸರಾ ಉದ್ಘಾಟನೆ ಮಾಡುವ ದರ್ದು ಏನಿದೆ? ಹಿಂದೂಗಳ ಭಾವನೆಗೆ ಪ್ರತಿ ವಿಚಾರದಲ್ಲಿಯೂ ಕಾಂಗ್ರೆಸ್ ಧಕ್ಕೆ ತರುತ್ತದೆ ಎಂದು ನಿಟ್ಟೆ ಸುದೀಪ್ ಶೆಟ್ಟಿ ಪೋಸ್ಟ್ ಮಾಡಿದ್ದು, ಅವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.