HomeLatest NewsALERT : 'ಮೊಬೈಲ್' ಬಳಕೆದಾರರೇ ಎಚ್ಚರ : ಅಪ್ಪಿತಪ್ಪಿಯೂ ಇಂತಹ ಜಾಗದಲ್ಲಿ ಮೊಬೈಲ್ ಇಟ್ಟುಕೊಳ್ಳಬೇಡಿ.!

ALERT : ‘ಮೊಬೈಲ್’ ಬಳಕೆದಾರರೇ ಎಚ್ಚರ : ಅಪ್ಪಿತಪ್ಪಿಯೂ ಇಂತಹ ಜಾಗದಲ್ಲಿ ಮೊಬೈಲ್ ಇಟ್ಟುಕೊಳ್ಳಬೇಡಿ.!

ಡಿಜಿಟಲ್ ಡೆಸ್ಕ್ : ಯಾವಾಗಲೂ ಎಲ್ಲರ ಕೈಯಲ್ಲಿ ಇರುವ ಸಾಧನ ಮೊಬೈಲ್. ಮೊಬೈಲ್ ಇಲ್ಲದೇ ಜನರು ಊಟ ಕೂಡ ಮಾಡಲ್ಲ. ಎಲ್ಲಾ ಸಮಯದಲ್ಲೂ ಮೊಬೈಲ್ ಇರಲೇಬೇಕು. ಮೊಬೈಲ್ ಇಲ್ಲದೆ ಹಲವರಿಗೆ ನಿದ್ದೆ ಕೂಡ ಬರಲ್ಲ. ಗಮನಿಸಿ.. ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ನಿಮ್ಮ ಮೊಬೈಲನ್ನು ಬಳಸಲೇಬೇಡಿ.

ಶರ್ಟ್ ಅಥವಾ ಪ್ಯಾಟ್ ಜೇಬುಗಳಲ್ಲಿ ಯಾವಾಗಲೂ ಮೊಬೈಲ್ ಇಟ್ಟುಕೊಳ್ಳುವುದು ತುಂಬಾ ಅಪಾಯ
ನೀವು ಹಿಂದಿನ ಅಥವಾ ಮುಂದಿನ ಜೇಬುಗಳಲ್ಲಿ ಮೊಬೈಲ್ ಇಟ್ಟುಕೊಳ್ಳುವುದು ತುಂಬಾ ಅಪಾಯಕಾರಿ. ಇದು ನಿಮ್ಮ ಹೊಟ್ಟೆ ನೋವು ಅಥವಾ ಕಾಲು ನೋವಿಗೆ ಕಾರಣವಾದೀತು. ಮೊಬೈಲ್ ಸದಾ ಇಂಟರ್ನೆಟ್ ಸಂಪರ್ಕ ಹೊಂದಿರುವ ಕಾರಣ ಅದು ಸಾಕಷ್ಟು ತರಂಗಗಳನ್ನು ಉಂಟು ಮಾಡುತ್ತಿರುತ್ತದೆ. ಇದು ನಿಮ್ಮ ದೇಹದ ವಿವಿಧ ಭಾಗಗಳಿಗೆ ಸಮಸ್ಯೆಯನ್ನು ಉಂಟು ಮಾಡುತ್ತದೆ. ಅಲ್ಲದೆ ಕ್ಯಾನ್ಸರ್ ಗೆ ಕಾರಣವಾಗುವ ಸಂಭವ ಹೆಚ್ಚಿದೆ.

ಬೆಡ್ ರೂಂ
ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಮೊಬೈಲನ್ನು ಎಲ್ಲರೂ ಇಟ್ಟುಕೊಂಡೇ ಇರುತ್ತಾರೆ. ಕಾರಣ ಬರುವ ಮೆಸೇಜ್ ಗಳನ್ನು ಓದುವುದು, ರಾತ್ರಿ ಮೆಸೇಜುಗಳನ್ನು ಓದಿಯೇ ಮಲಗುವುದು. ಇದೆಲ್ಲದರ ಜೊತೆಗೆ ಅಲಾರಾಂ ಇಟ್ಟುಕೊಳ್ಳುವುದು ಅಭ್ಯಾಸ ಆಗಿ ಬಿಟ್ಟಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಿಂಬಿನ ಕೆಳಗೆ ಮೊಬೈಲ್ ಇಡಬೇಡಿ
ದಿಂಬಿನ ಕೆಳಗೆ ಮೊಬೈಲನ್ನು ಇಟ್ಟುಕೊಳ್ಳುವುದರಿಂದ ನಿಮಗೆ ಸುಖ ನಿದ್ರೆಗೆ ಭಂಗ ಉಂಟಾಗುತ್ತದೆ. ಅಲ್ಲಿ ಬರುವ ನೀಲಿ ಬಣ್ಣದ ದ್ವೀಪವು ನಿಮ್ಮ ನಿದ್ದೆಗೆ ಅಡ್ಡಿ ಮಾಡುತ್ತದೆ. ಅಲ್ಲದೇ ಬೇಗ ಏಳಲು ಆಗದ ಪರಿಸ್ಥಿತಿ ನಿಮ್ಮದಾಗುತ್ತದೆ. ಇದರಿಂದ ಸೋಮಾರಿತನವೂ ಹೆಚ್ಚುತ್ತ ಹೋಗುತ್ತದೆ.

ನಿಮ್ಮ ಶರ್ಟ್ ಇಲ್ಲವೇ ಬ್ರಾ ಒಳಗೆ ಇಟ್ಟುಕೊಳ್ಳಬೇಡಿ
ನೀವು ಹೀಗೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅಲ್ಲದೆ ವೈಬ್ರೆಟ್ ಮೋಡ್ನಲ್ಲಿ ಇಟ್ಟುಕೊಂಡರೆ ಇನ್ನೂ ಅಪಾಯಕಾರಿ. ನಿಮ್ಮ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಅದಕ್ಕೆ ಹಾನಿ ಉಂಟಾಗುತ್ತವೆ.

ಮುಖಕ್ಕೆ ತಾಗಿಸಿ ಹಿಡಿದುಕೊಳ್ಳಬೇಡಿ
ನೀವು ಮೊಬೈಲ್ ಕರೆ ಸ್ವೀಕರಿಸುವಾಗ ಯಾವುದೇ ಕಾರಣಕ್ಕೂ ಮುಖಕ್ಕೆ ತಾಗುವಂತೆ ಇಟ್ಟುಕೊಳ್ಳಬೇಡಿ. ಯಾಕೆಂದರೆ ನಮ್ಮ ಫೋನಿನಲ್ಲಿ ಬ್ಯಾಕ್ಟೀರಿಯಾ ಬಹಳವಾಗಿ ಇರುತ್ತವೆ. ಇದು ನಿಮ್ಮ ಮುಖದ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಚರ್ಮಕ್ಕೆ ಸೋಂಕು ತಾಗುವುದಲ್ಲದೇ ತುರಿಕೆಯೂ ಪ್ರಾರಂಭವಾಗುತ್ತದೆ. ಹೀಗಾಗಿ ಈ ತೊಂದರೆಯಿಂದ ಅಲ್ಪ ಪ್ರಮಾಣದಲ್ಲಿ ಆದರೂ ಪಾರಾಗಬೇಕೆಂದರೆ ಇಯರ್ ಫೋನನ್ನು ಬಳಸಿ.

ಬಾತ್ ರೂಂಗೂ ಮೊಬೈಲ್ ಬೇಡವೇ ಬೇಡ
ಬಾತ್ ರೂಮ್ ಗೆ ನಾವು ಹೋಗುವುದೇ ನಮ್ಮ ಮೈಯಲ್ಲಿರುವ ಕೊಳೆಯನ್ನು ಹೋಗಲಾಡಿಸುವ ಸಲುವಾಗಿ. ಹೀಗಿರುವಾಗ ನಿಮ್ಮ ಮೊಬೈಲನ್ನು ನೀವು ಅಲ್ಲಿಗೇ ಕೊಂಡೊಯ್ದರೆ ಅಲ್ಲಿರುವ ಬ್ಯಾಕ್ಟೀರಿಯಾ ನಿಮ್ಮ ಮೊಬೈಲ್ ಸೇರುವುದಿಲ್ಲವೆ? ಹೀಗಾಗಿ ಅಲ್ಲಿಗೆ ತೆಗೆದುಕೊಂಡು ಹೋಗುವ ಮುನ್ನ ಒಮ್ಮೆ ಯೋಚಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular