BREAKING : ಮಂಡ್ಯದಲ್ಲಿ ಗುಂಡಿನ ಸದ್ದು : ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್.!

ಮಂಡ್ಯ : ಮಂಡ್ಯದಲ್ಲಿ ಗುಂಡಿನ ಸದ್ದು ಕೇಳಿಬಂದಿದ್ದು, ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಆಭರಣದ ಅಂಗಡಿಯಲ್ಲಿ ಕಳ್ಳತನ ಮಾಡುವುದನ್ನು ನೋಡಿದ ಹೋಟೆಲ್ ಮಾಲೀಕನ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಇತ್ತೀಚೆಗೆ ಕಿರಣ್, ಆನಂದ್, ಶರತ್, ಶ್ರೀನಿವಾಸ, ಕೃಷ್ಣಾಚಾರಿ ಯನ್ನು ಪೊಲೀಸರು ಬಂಧಿಸಿದ್ದರು.ಪ್ರಕರಣದ ಪ್ರಮುಖ ಆರೋಪಿ ಕಿರಣ್ ನನ್ನು ಮಂಡ್ಯದ ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಬಳಿ ಬಂಧಿಸುವ ವೇಳೆ ಪೊಲೀಸ್ ಪೇದೆ ಮೇಲೆ ಆತ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ, ಪೊಲೀಸರು ಪ್ರಾಣ ರಕ್ಷಣೆಗಾಗಿ ಹಲಗೂರು ಠಾಣೆ ಸಿಪಿಐ ಶ್ರೀಧರ್ ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ.

ಆಗಸ್ಟ್ 17ರಂದು ಕಿರುಗಾವಲು ಗ್ರಾಮದಲ್ಲಿ ಕಳ್ಳತನ ನಡೆದಿತ್ತು. ಮಹಾಲಕ್ಷ್ಮಿ ಜ್ಯುವೆಲರಿ ಶಾಪ್ ನಲ್ಲಿ ಚಿನ್ನಾಭರಣ ದೋಚಿದ್ದರು. ಬೆಳಗಿನ ಜಾವ ಮೂರು ಗಂಟೆಗೆ ಗ್ಯಾಸ್ ಕಟರ್ ನಿಂದ ಶೆಟರ್ ಮುರಿದು ಕಳವು ಮಾಡಿದ್ದರು. 110 ಗ್ರಾಂ ಚಿನ್ನ, ಎರಡು ಕೆಜಿ ಬೆಳ್ಳಿ ಆಭರಣ ದೋಚಿದ್ದರು. ಕಳ್ಳತನ ಮಾಡುವುದನ್ನು ಪಕ್ಕದ ಹೋಟೆಲ್ ಮಾಲೀಕ ನೋಡಿದ್ದರು. ಈ ವೇಳೆ ಉಸಿರುಗಟ್ಟಿಸಿ ಮಾದಪ್ಪ (60) ಅವರನ್ನು ಆರೋಪಿಗಳು ಕೊಲೆ ಮಾಡಿದ್ದರು. ಆರೋಪಿಗಳು ಮಂಡ್ಯ ತಾಲೂಕಿನ ಈಚಗೆರೆ ಮತ್ತು ಕೊತ್ತತ್ತಿ ಗ್ರಾಮದವರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read