HomeLatest NewsBIG NEWS : 'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ಹಬ್ಬದ ಮುಂಗಡ, 'EL' ಗೆ...

BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ಹಬ್ಬದ ಮುಂಗಡ, ‘EL’ ಗೆ ಈ ರೀತಿ ಅರ್ಜಿ ಸಲ್ಲಿಸುವಂತೆ ಸೂಚನೆ.!

ಬೆಂಗಳೂರು :   ಹೆಚ್. ಆರ್. ಎಂ. ಎಸ್ – 2 ತಂತ್ರಾಂಶದಲ್ಲಿ ವೇತನ ಸೆಳೆಯುವ ನೌಕರರು ಹಬ್ಬದ ಮುಂಗಡ ಪಡೆಯಲು ಹಾಗೂ ಗಳಿಕೆ ರಜೆಯ ನಗಧೀಕರಣಕ್ಕಾಗಿ ESS ನ ಅಪ್ಲಿಕೇಶನ್ ಮೂಲಕವೇ ಅರ್ಜಿ ಸಲ್ಲಿಸುವ ಬಗ್ಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ.

ರಾಜ್ಯದಲ್ಲಿರುವ ಎಲ್ಲಾ ಸಚಿವಾಲಯಗಳ/ ಇಲಾಖೆಗಳ ಪೈಕಿ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವನ್ನು ಬಳಸಿ ಈಗಾಗಲೇ ವೇತನ ಸೆಳೆಯುತ್ತಿರುವ ನೌಕರರಿಗೆ ESS (Employee Self Service) 2 web portal “https://hrmsess.karnatakata.gov.in” e Android & ESS ಅಪ್ಲಿಕೇಶನ್ (APK Name: gov.ka.ess_app) ನ ಬಳಸಿ ಸದರಿ ನೌಕರರ/ ಅಧಿಕಾರಿಗಳ ಲಾಗಿನ್ ಮೂಲಕ ಈ ಕೆಳಕಂಡ ವಿವರಗಳನ್ನು ವೀಕ್ಷಿಸಬಹುದು:

1. ವೇತನ ಪಟ್ಟಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2. ರಜಾ ವಿವರಗಳು.

a. ಗಳಿಕೆ ರಜೆ.

b. ಅರ್ಧ ವೇತನ ರಜೆ.

c. ಮುಂಬರುವ ಸಾರ್ವಜನಿಕ ರಜಾದಿನಗಳು.

3. ಸಾಲದ ವಿವರಗಳು.

a. ಸಕ್ರಿಯ ಸಾಲಗಳು.

b. ಮುಕ್ತಗೊಳಿಸಿದ ಸಾಲಗಳು.

4. ಮುಂಗಡ ವಿವರಗಳು.

8. ಸಕ್ರಿಯ ಮುಂಗಡಗಳು.

b. ಮುಚ್ಚಿದ ಮುಂಗಡಗಳು.

c. ಮುಂಗಡ ಅರ್ಜಿಗಳು.

5. ವಿಮೆ.

a. ಸಕ್ರಿಯ ವಿಮೆಗಳು.

b. ಒಟ್ಟು ಪ್ರೀಮಿಯಂ ಮೊತ್ತ.

6. ವಸೂಲಾತಿ.

a. ಸಕ್ರಿಯ ವಸೂಲಾತಿಗಳು.

b. ಸಕ್ರಿಯ ಸ್ಥಳೀಯ ವಸೂಲಾತಿಗಳು.

c. ಮುಕ್ತಗೊಳಿಸಿದ ವಸೂಲಾತಿಗಳು.

7. ಡಿಜಿಲಾಕರ್.

8. ನೌಕರರ/ ಅಧಿಕಾರಿಯ ಪ್ರೋಫೈಲ್.

a. ನೌಕರರ/ ಅಧಿಕಾರಿಯ ಮಾಹಿತಿ.

b. ಸಂಯೋಜನೆಗಳು.

c. ಸಹಾಯ ಮತ್ತು ಬೆಂಬಲ.

9. ಹಬ್ಬದ ಮುಂಗಡ.

10. ಗಳಿಕೆ ರಜೆ ನಗದೀಕರಣ.

ಮೇಲ್ಕಂಡ ವಿವರಗಳ ಕ್ರಮ ಸಂಖ್ಯೆ 1 ರಿಂದ 8 ರಲ್ಲಿರುವಂತೆ ESS ಲಾಗಿನ್ ಮೂಲಕ ಸದರಿ ನೌಕರರು/ ಅಧಿಕಾರಿಗಳು ಅವರ ವೇತನದ ವಿವರಗಳನ್ನು ವೀಕ್ಷಿಸಲು ಮಾತ್ರ ಅನುವುಮಾಡಿಕೊಡಲಾಗಿದೆ. ಮುಂದುವರೆದು. ಕ್ರಮ ಸಂಖ್ಯೆ 9 ಹಾಗೂ 10 ರಲ್ಲಿರುವಂತೆ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವು ಕಾಲಕಾಲಕ್ಕೆ ಹೊಸ ಮಾಡ್ಯೂಲ್ ಗಳ ಜೊಡಣೆಯಿಂದ ನವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವನ್ನು ಬಳಸಿ ವೇತನವನ್ನು ಸೆಳೆಯುತ್ತಿರುವ ನೌಕರರು ಇನ್ನು ಮುಂದೆ ಹಬ್ಬದ ಮುಂಗಡ (FA) ಪಡೆಯಲು ಅರ್ಜಿಯನ್ನು ಹಾಗೂ ಗಳಿಕೆ ರಜೆಯ ನಗಧೀಕರಣಕ್ಕಾಗಿ (EL encashment) ಅರ್ಜಿಯನ್ನು ಅವರ ಲಾಗಿನ್ ಬಳಸಿ ESS ನ ಅಪ್ಲಿಕೇಶನ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಕೋರಿದೆ .

ಬಗ್ಗೆ ತಮ್ಮ ಇಲಾಖಾ ವ್ಯಕ್ತಿಯಲ್ಲಿರುವ ಎಲ್ಲಾ ಡಿ.ಡಿ.ಒ ಗಳಿಗೆ ಸೂಕ್ತ ಮಾರ್ಗಸೂಚಿಯನ್ನು/ನಿರ್ದೇಶನವನ್ನು ನೀಡಲು ಕೋರಿದೆ.

ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವನ್ನು ಬಳಸಿ ವೇತನವನ್ನು ಸೆಳೆಯುತ್ತಿರುವ ನೌಕರರ ಸಹಾಯಕ್ಕಾಗಿ, ಹಬ್ಬದ ಮುಂಗಡ ಪಡೆಯಲು ಹಾಗೂ ಗಳಿಕೆ ರಜೆಯ ನಗಧೀಕರಣಕ್ಕಾಗಿ ESS ನ ಅಪ್ಲಿಕೇಶನ್ ಮೂಲಕವೇ ಅರ್ಜಿ ಸಲ್ಲಿಸುವ ವಿಧಾನದ ಕೈಪಿಡಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ. ಈ ಕೈಪಿಡಿಯ ‘ಸಾಫ್ಟ್ ಪ್ರತಿ” ಯನ್ನು ಹೆಚ್. ಆರ್. ಎಂ. ಎಸ್ 2 ತಂತ್ರಾಂಶದ ಲ್ಯಾಂಡಿಗ್ ಪುಟದಲ್ಲಿರುವ “Help and Tutorials” ಮಾಡ್ಯೂಲ್ ನಲ್ಲಿ ವಿಕ್ಷಿಸಲು ಹಾಗೂ ಡೌನ್‌ಲೋಡ್ ಮಾಡಲು ಕೂಡ ಅನುಕೂಲ ಮಾಡಿಕೊಡಲಾಗಿದೆ.

ಇದರ ಸದುಪಯೋಗ ಪಡೆಯಲು ಸೂಚಿಸಿ, ಇನ್ನು ಮುಂದೆ ಎಲ್ಲಾ ನೌಕರರ ಕ್ಷೇಮ್ ಗಳ ಕೋರಿಕೆ, ರಜೆಯ ಕೋರಿಕೆ, ದೂರು ಪರಿಹಾರ (complaint redressal) ದ ಪ್ರಕ್ರಿಯೆಗಳು ಕೂಡ ESS ಮುಖಾಂತರವೇ ನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು. ಎಲ್ಲಾ ನೌಕರರು ತಮ್ಮ ಕೋರಿಕೆ ಅರ್ಜಿಯನ್ನು ಆನ್ ಲೈನ್ ನಲ್ಲಿ ESS ಮೂಲಕವೇ ನೀಡಬೇಕಾಗಿರುವುದರಿಂದ ಹಬ್ಬದ ಮುಂಗಡ ಹಾಗೂ ಗಳಿಕೆ ರಜೆಯ ನಗಧೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಕವಾಗಿ ESS ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಮ್ಮ ಮುಖಾಂತರ ನಿಮ್ಮ ಇಲಾಖಾ ವ್ಯಾಪ್ತಿಗೆ ಬರುವ ಎಲ್ಲಾ ನೌಕರರಿಗೆ ತಿಳಿಸಲು/ ಅರಿವು ಮೂಡಿಸಲು ಈ ಪತ್ರದ ಮೂಲಕ ಕೋರಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular