ಬೆಂಗಳೂರು: ಧರ್ಮಸ್ಥಳದಲ್ಲಿ ನಾಪತ್ತೆಯಾಗಿರುವ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನನ್ನ ಮಗಳು. ಆಕೆ ನನ್ನ ಹೊಟ್ಟೆಯಲ್ಲಿ ಹುಟ್ತಿದ ಮಗಳು. ಆಕೆಯ ಬರ್ತ್ ಸರ್ಟಿಫಿಕೇಟ್ ಸೇರಿದಂತೆ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ. ಅದನ್ನು ತನಿಖೆಗೆ ಎಲ್ಲಿ ಯಾರಿಗೆ ಕೊಡಬೇಕು ಕೊಡುತ್ತೇನೆ ಎಂದು ಸುಜಾತಾ ಭಟ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಜಾತಾ ಭಟ್, ನಾನು ಮಾಧ್ಯಮಗಳಿಗೆ ಯಾವುದೇ ದಾಖಲೆಗಳನ್ನು ಕೊಡಲ್ಲ. ನನ್ನ ಬಳಿ ಇದ್ದ ಅನನ್ಯಾ ಭಟ್ ಅವಳ ಒಂದು ಸಣ್ಣ ಫೋಟೋವನ್ನು ಈಗಾಗಲೇ ನಾನು ತೋರಿಸಿದ್ದೇನೆ. ಮತ್ತೆ ಬೇರೆ ಯಾವ ದಾಖಲೆಯನ್ನು ಮಾಧ್ಯಮಗಳಿಗೆ ಕೊಡಲ್ಲ. ಅವುಗಳನ್ನು ಎಲ್ಲಿ ಯಾರಿಗೆ ಕೊಡಬೇಕೋ ಅವರಿಗೆ ಕೊಡುತ್ತೇನೆ ಎಂದಿದ್ದಾರೆ.
ಮಂಜುನಾಥನ ಮೇಲೆ ಆಣೆ ಪ್ರಮಾಣ ಮಾಡಿ ಹೇಳುತ್ತೇನೆ. ಅನನ್ಯಾ ಭಟ್ ನನ್ನ ಮಗಳು. ಅನಿಲ್ ಭಟ್ ನನ್ನ ಪತಿ. ಅನಿಲ್ ಭಟ್ ಹಾಗೂ ನನ್ನ ಮಗಳೇ ಅನನ್ಯಾ ಭಟ್. ನಾನು ಯಾವ ಆಸ್ತಿ ವಿಚಾರಕ್ಕಾಗಿ ಹೇಳುತ್ತಿಲ್ಲ. ನನಗೆ ಯಾವುದೇ ಆಸ್ತಿ ಬೇಡ. ಅನನ್ಯಾ ಭಟ್ ಳನ್ನು ಹುದುಕಿಕೊಡಿ. ಒಂದು ವೇಳೆ ಆಕೆ ಸಾವನ್ನಪ್ಪಿದ್ದರೆ ಆಕೆಯ ಅಸ್ತಿಯನ್ನು ನನ್ನಗೆ ಕೊಡಿಸಿ ಎಂದು ಕೆಳುತ್ತಿದ್ದೇನೆ. ಆಸ್ತಿ ವಿಚಾರಕ್ಕಾಗಿ ನಾನು ಕೇಳುತ್ತಿಲ್ಲ. ನಾನು ಇಷ್ಟು ವರ್ಷವೇ ಆಸ್ತಿಗಾಗಿ ಹೋರಾಡಿಲ್ಲ. ನನಗೆ ಶಕ್ತಿಯಿದೆ ದುಡಿದು ತಿನ್ನುತ್ತೇನೆ ಎಂದಿದ್ದಾರೆ.
ಇನ್ನು ನಾನು ಮಹೇಶ್ ತಿಮರೋಡಿ ಮನೆಗೆ ಭೇಟಿ ನೀಡಿದು ನಿಜ. ಅಲ್ಲಿ 4 ದಿನ ಇದ್ದೆ. ಅವರು ನನ್ನ ಬ್ರೇನ್ ವಾಶ್ ಮಾಡಿಲ್ಲ. ಊಟ ಹಾಕಿದ್ದಾರೆ ಅಷ್ಟೇ. ತಿಮರೋಡಿ ಮನೆಯಿಂದ ಬಂದ ಬಳಿಕ ನಾನು ನನ್ನ ಸ್ನೇಹಿತರ ಮನೆಯಲ್ಲಿದ್ದೆ. ಅವರ ಹೆಸರನ್ನು ನಾನು ಬಹಿರಂಗಪಡಿಸಲ್ಲಾ ಎಂದು ತಿಳಿಸಿದ್ದಾರೆ.