BIG NEWS : ‘ಆನ್’ಲೈನ್ ಬೆಟ್ಟಿಂಗ್’ ಗೆ 7 ವರ್ಷ ಜೈಲು, 1 ಕೋಟಿ ರೂ.ದಂಡ : ಕೇಂದ್ರದಿಂದ ಇಂದು ಮಹತ್ವದ ಮಸೂದೆ ಮಂಡನೆ

ನವದೆಹಲಿ : ಮಕ್ಕಳು ಮತ್ತು ಯುವಕರಲ್ಲಿ ವ್ಯಸನದ ಜೊತೆಗೆ ಆರ್ಥಿಕ ನಷ್ಟದಿಂದಾಗಿ ಆತ್ಮಹತ್ಯೆಗಳಿಗೆ ಕಾರಣವಾಗುವುದನ್ನು ಗಮನಿಸಿ, ಹಣಕಾಸಿನ ಅಂಶವನ್ನು ಹೊಂದಿರುವ ಆನ್ಲೈನ್ ಆಟಗಳ ಮೇಲೆ ಸಂಪೂರ್ಣ ನಿಷೇಧ ಹೇರುವ ಮಹತ್ವದ ಮಸೂದೆ ಇಂದು ಸಂಸತ್ ನಲ್ಲಿ ಮಂಡನೆಯಾಗಲಿದೆ.

ಆನ್ಲೈನ್ ಬೆಟ್ಟಿಂಗ್ ಮತ್ತು ರಿಯಲ್ ಮನಿ ಗೇಮ್ ನಿಷೇಧಿಸಿ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಘೋಷಿಸುವ ಮಹತ್ವದ ಕಾಯ್ದೆ ಯ್ದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಕರಡು ಮಸೂದೆಗೆ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದ್ದು, ಅನಧಿಕೃತ ಬೆಟ್ಟಿಂಗ್ಗೆ 7 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿವರೆಗೆ ದಂಡ ವಿಧಿಸಲಾಗುತ್ತದೆ. ಇದನ್ನು ಇಂದು ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ.ಇಂಥ ಬೆಟ್ಟಿಂಗ್ ಆ್ಯಪ್ಗಳ ಪರ ಪ್ರಚಾರವನ್ನೂ ನಿರ್ಬಂಧಿಸಲಾಗಿದ್ದು ಅದನ್ನೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗಿದೆ.

ಗೇಮಿಂಗ್ ವ್ಯಸನ, ಮಾನಸಿಕ ಆರೋಗ್ಯ, ಆರ್ಥಿಕ ನಷ್ಟಗಳು ಮತ್ತು ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸಲು ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯದ ಬಗ್ಗೆಯೂ ಈ ಮಸೂದೆ ಕಳವಳ ವ್ಯಕ್ತಪಡಿಸುತ್ತದೆ. ಭಾರತದ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಗೇಮಿಂಗ್ ಉದ್ಯಮವನ್ನು ರಾಷ್ಟ್ರೀಯ ಹಿತಾಸಕ್ತಿಗಳು, ಸಾರ್ವಜನಿಕ ಸುರಕ್ಷತೆ ಮತ್ತು ನೈತಿಕ ವ್ಯವಹಾರ ಅಭ್ಯಾಸಗಳೊಂದಿಗೆ ಜೋಡಿಸುವುದನ್ನು ಇದು ಒತ್ತಿಹೇಳುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read