ಮಾದಕ ವಸ್ತು ಬಳಕೆ ದುಷ್ಪರಿಣಾಮಗಳ ಬಗ್ಗೆ ಶಾಲೆಗಳಲ್ಲಿ ಎಚ್ಚರಿಕೆ ಫಲಕ ಅಳವಡಿಸಲು ಸುತ್ತೋಲೆ

ಬೆಂಗಳೂರು: ಶಾಲೆಗಳಲ್ಲಿ ಮಾದಕ ವಸುಗಳ ಬಳಕೆ ಹಾಗೂ ಅದರ ದುಷ್ಪರಿಣಾಮಗಳ ಕುರಿತು ಇವು ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವೆಂದು ಸೂಚನ ಫಲಕ ಅಳವಡಿಸುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ (1) ರಂತೆ ದಿನಾಂಕ: 13.02.2025ರಂದು ನಡೆದ NCORD ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿರುವಂತೆ ಹಾಗೂ ನಡವಳಿಗಳಂತೆ ಶಾಲೆಗಳ ಹೊರ ಆವರಣದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಅದರ ದುಷ್ಪರಿಣಾಮಗಳ ಕುರಿತು ಇವು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವೆಂದು ಸೂಚನಾ /ಎಚ್ಚರಿಕೆ ಫಲಕಗಳನ್ನು ಶಾಲೆಗಳಲ್ಲಿ ಅಳವಡಿಸುವ ಬಗ್ಗೆ, ನಿರ್ದೇಶನ ನೀಡಲಾಗಿರುತ್ತದೆ.

ಸದರಿ ಸೂಚನ / ಎಚ್ಚರಿಕೆ ಫಲಕ ನಿರ್ದಿಷ್ಟತೆಯನ್ನು ನಿಗದಿ ಪಡಿಸುವ ಸಂಬಂಧ ಉಲ್ಲೇಖ (3) ರಂತೆ ಮಾನ್ಯ ಪೊಲೀಸ್ ಮಹಾ ನಿರ್ದೇಶಕರು, ಎ.ಎನ್.ಟಿ.ಎಫ್ ಮುಖ್ಯಸ್ಥರು, ಸಿ.ಐ.ಡಿ ಬೆಂಗಳೂರು ಇವರಿಗೆ ಪತ್ರ ಬರೆಯಲಾಗಿತ್ತು. ಉಲ್ಲೇಖ (4) ರಂತೆ ಎಚ್ಚರಿಕೆ ಫಲಕಗಳ ನಿರ್ದಿಷ್ಟತೆ ಬಗ್ಗೆ ಸೃಷ್ಟಿಕರಣ ನೀಡಿರುತ್ತಾರೆ.

ಸದರಿ ಸೃಷ್ಟಿಕರಣದಂತೆ ಮಾದಕ ವಸ್ತುಗಳ ಬಳಕೆ ಹಾಗೂ ಅದರ ದುಷ್ಪರಿಣಾಮಗಳ ಕುರಿತು ಇವು ಕಾನೂನು ಬಾಹಿರ ಹಾಗು ಶಿಕ್ಷಾರ್ಹ ಅಪರಾಧವೆಂದು ಬಿಂಬಿಸುವ ಸೂಚನ / ಎಚ್ಚರಿಕೆ ಫಲಕಗಳನ್ನು ಅಳವಡಿಸಲು, “ಸದರಿ ಫಲಕವು ವಾಟರ್ ಪೂಫ್ ಆಗಿರಬೇಕಲ್ಲದೆ ವೀಕ್ಷಕರಿಗೆ ದೂರದಿಂದ ಸ್ಪಷ್ಟವಾಗ ಗೋಚರಿಸುವಂತಿರಬೇಕು. ಅದರ ಅಳತೆ 90 x 65″ ಇಂಚುಗಳಾಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿನ ಸೂಚನೆಗಳನ್ನು ಒಂದೇ ಫಲಕದಲ್ಲಿ ನಮೂದಿಸತಕ್ಕದ್ದು ಹಾಗೂ ಸದರಿ ಫಲಕ ದೀರ್ಘಕಾಲ ಬಾಳಿಕೆ ಬರುವಂತಿದ್ದು ಉತ್ತಮ ಗುಣಮಟ್ಟದ ವಸ್ತುವಾಗಿರಬೇಕು” ಎಂದು ತಿಳಿಸಿರುತ್ತಾರೆ. (ಪತ್ರದ ಪ್ರತಿ ಲಗತ್ತಿಸಿದೆ).

ಸದರಿ ಪತ್ರದಲ್ಲಿ ತಿಳಿಸಿರುವಂತೆ ತಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಫಲಕವನ್ನು ಅಳವಡಿಸಲು ಕ್ರಮವಹಿಸಲು ತಿಳಿಸಿದೆ. ಅನುದಾನ ರಹಿತ ಮತ್ತು ಅನುದಾನಿತ ಶಾಲೆಗಳಲ್ಲಿ ಸದರಿ ಫಲಕ ಅಳವಡಿಸಲು ತಗಲುವ ವೆಚ್ಚವನ್ನು ಆಯಾ ಶಾಲಾ ಆಡಳಿತ ಮಂಡಳಿಗಳವರು ಭರಿಸಿ ಕ್ರಮವಹಿಸಲು ತಿಳಿಸುವುದು.

ಸರ್ಕಾರಿ ಶಾಲೆಗಳ ಸಂದರ್ಭದಲ್ಲಿ ಫಲಕವನ್ನು ಅಳವಡಿಸಲು ತಗಲುವ ವೆಚ್ಚವನ್ನು ಶಾಲಾ ಹಂತದಲ್ಲಿ 5.D.M.C ರವರಿಗೆ ಶಾಲಾ ನಿರ್ವಹಣೆ ಅನುದಾನದಲ್ಲಿ ವೆಚ್ಚ ಭರಿಸಲು ತಿಳಿಸಿ ಕ್ರಮವಹಿಸುವುದು. ಈ ಮೇಲಿನಂತೆ ಕ್ರಮವಹಿಸಿದ ಕುರಿತು ವರದಿಯನ್ನು ಸಲ್ಲಿಸಲು ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read