BREAKING: ನಟ ದರ್ಶನ್ ಜೀವನ ಹಾಳು ಮಾಡಿಕೊಂಡ್ರು: ನಟಿ ರಮ್ಯಾ ಪ್ರತಿಕ್ರಿಯೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ಜೈಲು ಪಾಲಾಗಿರುವ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಬೆಳವಣಿಗೆ ನೋಡಿ ನಮಗೆ ಹೆಮ್ಮೆ ಅನಿಸಿತ್ತು. ಆದರೆ, ಈಗ ದರ್ಶನ್ ಜೀವನ ಹಾಳು ಮಾಡಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿಗೆ ಧನ್ಯವಾದ ಹೇಳುತ್ತೇನೆ ಎಂದು ಬೆಂಗಳೂರಿನಲ್ಲಿ ನಟಿ ರಮ್ಯಾ ಹೇಳಿದ್ದಾರೆ.

ದರ್ಶನ್ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಕೇಳಿದಾಗ ನನಗೆ ಬೇಸರ, ಸಮಾಧಾನ ಎರಡೂ ಆಯ್ತು. ‘ದತ್ತ’ ಸಿನಿಮಾದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ನನಗೆ ಗೊತ್ತಿರುವ ವ್ಯಕ್ತಿ. ಈ ಪ್ರಕರಣದಲ್ಲಿ ಅವರು ದುಡುಕಿ ಜೀವನ ಹಾಳು ಮಾಡಿಕೊಂಡಿದ್ದಾರೆ. ಕಷ್ಟಪಟ್ಟು ಮೇಲೆ ಬಂದವರ ಜೀವನ ಹೀಗಾಯ್ತಲ್ಲ ಎಂದು ಬೇಸರವಾಯಿತು. ಜೊತೆಯಾಗಿ ಕೆಲಸ ಮಾಡುತ್ತಿದ್ದಾಗ ಅವರು ತಮ್ಮ ಬದುಕಿನ ಬಗ್ಗೆ ನನ್ನ ಜೊತೆ ಹಂಚಿಕೊಂಡಿದ್ದರು. ಲೈಟ್ ಬಾಯ್ ಆಗಿದ್ದವರು ಈ ಲೆವೆಲ್ ಗೆ ಬೆಳೆದರಲ್ಲ ಎಂದು ಅವರ ಬಗ್ಗೆ ಹೆಮ್ಮೆ ಎನಿಸಿತ್ತು. ಆದರೆ ಇತ್ತೀಚಿನ ಅವರ ನಡವಳಿಕೆ ಬೇಸರ ತರಿಸಿದ್ದು ಅವರ ಅಕ್ಕಪಕ್ಕ ಒಳ್ಳೆಯವರು ಇಲ್ಲವೇನೋ ಎನಿಸಿತ್ತು. ದರ್ಶನ್ ಜೀವನ ಹಾಳು ಮಾಡಿಕೊಂಡರು. ದೊಡ್ಡ ಮಟ್ಟಕ್ಕೆ ಬೆಳೆಯಬಹುದಿತ್ತು ಎಂದು ಹೇಳಿದ್ದಾರೆ.

ದರ್ಶನ್ ಅಭಿಮಾನಿಗಳಿಂದ ಈಗ ಕೆಟ್ಟ ಕಮೆಂಟ್ ಬರುತ್ತಿಲ್ಲ. ಎಷ್ಟೋ ಜನ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. 7 ಮಂದಿ ಅರೆಸ್ಟ್ ಆಗಿದ್ದಾರೆ ಎಂದು ರಮ್ಯಾ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read